Nandi Hills: ನಂದಿ ಬೆಟ್ಟಕ್ಕೆ ಹರಿದು ಬಂದ ಜನಸಾಗರ; ಟ್ರಾಫಿಕ್ ಜಾಮ್ - ನಂದಿಬೆಟ್ಟ
ಚಿಕ್ಕಬಳ್ಳಾಪುರ : ಪ್ರಸಿದ್ಧ ಗಿರಿಧಾಮ ನಂದಿ ಹಿಲ್ಸ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಇಂದು ವೀಕೆಂಡ್ ಹಿನ್ನೆಲೆಯಲ್ಲಿ ಗಿರಿಧಾಮಕ್ಕೆ ಜನಸಾಗರವೇ ಹರಿದು ಬಂದಿತ್ತು. ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಕಂಡುಬಂತು. ಗಂಟೆಗಳಷ್ಟು ಕಾಲ ಸವಾರರು ಪರದಾಟ ಅನುಭವಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ನಂದಿ ಗಿರಿಧಾಮಕ್ಕೆ ಸಾಮಾನ್ಯ ದಿನಗಳಲ್ಲಿಯೇ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಅದರಲ್ಲೂ ವೀಕೆಂಡ್ ಬಂತಂದ್ರೆ ಸಾಕು, ಗಿರಿಧಾಮಕ್ಕೆ ಹೋಗುವ ರಸ್ತೆಗಳಲ್ಲಿ ಜನಸಂಚಾರಕ್ಕೂ ಸಾಕಷ್ಟು ತೊಂದರೆಯಾಗುತ್ತದೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಾಹನಗಳ ಓಡಾಟ ಇಲ್ಲಿ ಕಾಣಸಿಗುತ್ತದೆ.
ಬೆಂಗಳೂರಿಗೆ ಸಮೀಪದಲ್ಲಿರುವ ನಂದಿಬೆಟ್ಟ ಪ್ರಸಿದ್ಧವಾಗಿದೆ. ಇಲ್ಲಿನ ಪ್ರಕೃತಿ ಸೊಬಗು ಸವಿಯಲು ಪ್ರಕೃತಿಪ್ರಿಯರು ಸಾವಿರಾರು ಸಂಖ್ಯೆಯಲ್ಲಿ ಧಾವಿಸಿ ಬರುತ್ತಾರೆ. ಸೂರ್ಯೋದಯ ಹಾಗೂ ಸೂರ್ಯಾಸ್ತ ಸಮಯವನ್ನು ಇಲ್ಲಿ ಕಳೆಯಲು ಪ್ರವಾಸಿಗರು ಆಗಮಿಸುತ್ತಾರೆ.
ಆದರೆ ಗಿರಿಧಾಮದಲ್ಲಿ ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ಸ್ಥಳವಿಲ್ಲದೇ ಪ್ರವಾಸಿಗರು ಸಂಕಷ್ಟ ನಡೆಸುವಂತಾಗಿದೆ. ನಿಗದಿತ ಪಾರ್ಕಿಂಗ್ ಸ್ಥಳಕ್ಕಿಂತ ನಾಲ್ಕು ಪಟ್ಟು ಹೆಚ್ಚು ವಾಹನಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ:ನೂತನ ವರ್ಷಾಚರಣೆಗೆ ನಂದಿ ಬೆಟ್ಟ ಹೌಸ್‌ಫುಲ್; ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್