ಅತಿಭಾರ ಹೊತ್ತ ವಾಹನಗಳ ತಪಾಸಣೆ : ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಟ್ರಾಫಿಕ್ ಜಾಮ್ - ಕರ್ನಾಟಕ ತಮಿಳುನಾಡು ಟ್ರಾಫಿಕ್ ಜಾಮ್
Published : Nov 8, 2023, 4:54 PM IST
ಚಾಮರಾಜನಗರ: ಅತಿಭಾರ ಹೊತ್ತ ವಾಹನಗಳಿಗೆ ತಮಿಳುನಾಡು ಅರಣ್ಯ ಇಲಾಖೆಯು ದಂಡ ವಿಧಿಸುತ್ತಿದೆ. ಪ್ರತಿ ಲಾರಿ, ಟ್ರಕ್ಗಳ ತೂಕ ಅಳೆಯುತ್ತಿರುವುದರಿಂದ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಕಿಲೋ ಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಗಡಿಯಲ್ಲಿರುವ ಅಸನೂರಲ್ಲಿ ತಮಿಳುನಾಡಿನ ಅರಣ್ಯ ಇಲಾಖೆಯು ಅತಿಭಾರ ಹೊತ್ತ ವಾಹನಗಳಿಗೆ ದಂಡ ವಿಧಿಸುತ್ತಿರುವ ಹಿನ್ನೆಲೆ ಉಳಿದ ವಾಹನಗಳಾದ ಬಸ್, ಕಾರು, ಬೈಕ್ ಸವಾರರು ಗಂಟೆಗಟ್ಟಲೇ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದಾರೆ.
ದಿಂಬಂ ಘಟ್ಟ ಪ್ರದೇಶದಲ್ಲಿ ಸರಕು ತುಂಬಿದ ವಾಹನಗಳು 16ಟನ್ ಅಷ್ಟೇ ಹೊತ್ತು ಸಾಗಬೇಕು ಎಂದು ಹೈಕೋರ್ಟ್ ಆದೇಶ ಹಿನ್ನೆಲೆ ಗಡಿಯಲ್ಲಿ ಸರಕುಗಳ ತೂಕ ಪರೀಕ್ಷಿಸಿ ಅನುಮತಿ ನೀಡಲಾಗುತ್ತಿದೆ. ಈ ಹಿನ್ನೆಲೆ ವಾಹಗಳ ದಟ್ಟಣೆ ಉಂಟಾಗಿದೆ. 6 ಮತ್ತು 10 ಚಕ್ರದ ಲಾರಿಗಳು, ಟ್ರಕ್ಗಳು ಕೇವಲ 16.2 ಟನ್ ನಷ್ಟು ಮಾತ್ರ ಸರಕು ತುಂಬಿ ಸಾಗಣೆ ನಡೆಸಬಹುದಾಗಿದೆ. ಆದರೆ, ಬಹುತೇಕ ಲಾರಿಗಳು 20-25 ಟನ್ ನಷ್ಟು ತೂಕ ಹೊತ್ತು ಸಾಗುತ್ತಿದ್ದುದು ಕಂಡುಬಂದಿದ್ದರಿಂದ ಅರಣ್ಯ ಇಲಾಖೆ ಈ ಕ್ರಮ ತೆಗೆದುಕೊಂಡಿದೆ. ಇದರಿಂದ ಆಂಬ್ಯುಲೆನ್ಸ್ ಸೇರಿದಂತೆ ಹಲವು ವಾಹನಗಳು ಟ್ರಾಫಿಕ್ನಲ್ಲಿ ಸಿಲುಕಿ ಪರದಾಡುವಂತಾಗಿದೆ.
ಇದನ್ನೂ ಓದಿ:ತುಂಗಭದ್ರಾ ನದಿಗೆ ಉರುಳಿ ಬಿದ್ದ ಲಾರಿ, ಚಾಲಕ ಸಾವು