ಕರ್ನಾಟಕ

karnataka

ಮಲೆನಾಡಿನಲ್ಲಿ ಸಾಂಪ್ರದಾಯಿಕ ಕೆರೆ ಬೇಟೆ ಕ್ರೀಡೆ ಆಚರಣೆ

ETV Bharat / videos

ಮಲೆನಾಡ ಜನರ ಕೆರೆ ಬೇಟೆ ಸಂಭ್ರಮ ನೋಡಿ- ವಿಡಿಯೋ

By

Published : Apr 11, 2023, 4:16 PM IST

ಶಿವಮೊಗ್ಗ:ಮಲೆನಾಡಿನ ಅಪ್ಪಟ ಗ್ರಾಮೀಣ ಕ್ರೀಡೆಗಳಲ್ಲೊಂದಾದ ಕೆರೆ ಬೇಟೆಯು ಸೊರಬ ಪುರಸಭೆ ವ್ಯಾಪ್ತಿಯ ಕೊಡಕಣಿ ಗ್ರಾಮದ ತಾವರೆಕೆರೆಯಲ್ಲಿ ನಡೆಯಿತು. ಬೇಸಿಗೆ ಆರಂಭವಾಗುತ್ತಿದ್ದಂತೆ ಕೆರೆಗಳು ಬತ್ತುತ್ತವೆ. ಈ ಸಂದರ್ಭದಲ್ಲಿ ರೈತರು ಆಯಾ ಗ್ರಾಮಗಳಲ್ಲಿ ಮೀನು ಹಿಡಿಯುವುದನ್ನು ಕೆರೆ ಬೇಟೆ ಎನ್ನುತ್ತಾರೆ. ಸೊರಬ ತಾಲೂಕಿನಲ್ಲಿ ಸುಮಾರು 1200 ಕೆರೆಗಳಿವೆ. ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಗ್ರಾಮದಲ್ಲಿ‌ ಸುಮಾರು‌ 500 ಮನೆಗಳಿವೆ. ಮನೆಗೆ ಎರಡು ಕೂಣಿ, ಒಂದು ಜರಡಿ ಬಲೆ ಬಳಸಿ ಮೀನು ಹಿಡಿಯಲು ಅವಕಾಶ ಒದಗಿಸಲಾಗಿದೆ. ಇಲ್ಲಿನ ಗ್ರಾಮಸ್ಥರು ಮಾತ್ರವಲ್ಲದೇ ಹಳೇಸೊರಬ, ಹರಿಗೆ, ಕೋಡಿಹಳ್ಳಿ, ಅಂಡಿಗೆ, ಮಾವಲಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ಕೆರೆ ಬೇಟೆಯಲ್ಲಿ ಪಾಲ್ಗೊಂಡಿದ್ದರು.‌

ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ್ ಕೊಡಕಣಿ ಮಾತನಾಡಿ, "ಮಲೆನಾಡು ಭಾಗದಲ್ಲಿ ಕೆರೆ ಬೇಟೆಗೆ ವಿಶೇಷ ಮಹತ್ವವಿದೆ. ಪೂರ್ವಜರು ಆಚರಿಸಿಕೊಂಡು ಬಂದ ಹಬ್ಬವನ್ನು ಆಚರಿಸುತ್ತಿದ್ದೇವೆ. ಮಳೆಗಾಲದಲ್ಲಿ ಕೆರೆಗೆ ಮೀನುಗಳನ್ನು ಬಿಡಲಾಗಿತ್ತು. ಬೇಸಿಗೆಯಲ್ಲಿ ಕೆರೆಬೇಟೆ ಮಾಡುತ್ತೇವೆ. ಗ್ರಾಮಸ್ಥರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ" ಎಂದರು. 

ಇದನ್ನೂ ಓದಿ:Watch.. ಪಾಳು ಬಿದ್ದ ಮನೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ

ABOUT THE AUTHOR

...view details