ಶಾಸಕ ಬೆಲ್ಲದ್ ವಿರುದ್ಧ ಸಿಡಿದೆದ್ದ ವ್ಯಾಪಾರಿಗಳು: ಕಾರಿನ ಎದುರು ನಿಂತು ಪ್ರತಿಭಟನೆ - ಧಾರವಾಡ ಸೂಪರ್ ಮಾರುಕಟ್ಟೆಗೆ ಶಾಸಕ ಅರವಿಂದ ಬೆಲ್ಲದ್ ಭೇಟಿ
ಧಾರವಾಡ: ಶಾಸಕ ಅರವಿಂದ ಬೆಲ್ಲದ್ ನಿನ್ನೆ ಇಲ್ಲಿನ ಸೂಪರ್ ಮಾರುಕಟ್ಟೆಗೆ ಭೇಟಿ ನೀಡಿದರು. ಈ ವೇಳೆ ವ್ಯಾಪಾರಸ್ಥರು ಶಾಸಕರ ಕಾರಿನ ಎದುರು ನಿಂತು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬರುತ್ತಿದ್ದಂತೆ ವಾಹನದಿಂದ ಇಳಿದು ಮಾತನಾಡಲು ಮುಂದಾದ ಶಾಸಕರ ವಿರುದ್ಧ ವ್ಯಾಪಾರಸ್ಥರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸೂಪರ್ ಮಾರುಕಟ್ಟೆಯಲ್ಲಿ ಖಾಯಂ ಆಗಿ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.
Last Updated : Feb 3, 2023, 8:33 PM IST