ಹಳಿಗಳ ಮಧ್ಯೆ ಸಿಲುಕಿಕೊಂಡ ಟ್ರ್ಯಾಕ್ಟರ್: ತೆಲಂಗಾಣದಲ್ಲಿ ತಪ್ಪಿದ ರೈಲು ದುರಂತ - ನಲ್ಗೊಂಡ ಜಿಲ್ಲೆಯಲ್ಲಿ ಸಂಭವಿಸಬೇಕಾದ ದುರಂತ ಘಟನೆಯೊಂ
Published : Oct 27, 2023, 8:00 PM IST
ಹೈದರಾಬಾದ್: ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಸಂಭಾವ್ಯ ರೈಲು ದುರಂತ ಘಟನೆ ಸುದೈವವಶಾತ್ ತಪ್ಪಿದೆ. ರೈಲು ಹಳಿಗಳ ಮಧ್ಯೆ ಟ್ರ್ಯಾಕ್ಟರ್ ಸಿಲುಕಿಕೊಂಡಿತ್ತು. ವಿಚಾರ ತಿಳಿದ ಕೂಡಲೇ ಪಲ್ನಾಡು ಎಕ್ಸ್‌ಪ್ರೆಸ್ ರೈಲನ್ನು ಸಮೀಪದ ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಿ ಅವಘಡ ತಪ್ಪಿಸಲಾಗಿದೆ.
ನಲ್ಗೊಂಡ ಜಿಲ್ಲೆಯ ಮಡುಗುಲಪಲ್ಲಿಯ ಚೆನ್ನಯ್ಯ ಎಂಬವರು ಟ್ರ್ಯಾಕ್ಟರ್‌ನಲ್ಲಿ ಒಣ ಕಟ್ಟಿಗೆ ತುಂಬಿಕೊಂಡು ಹೋಗುತ್ತಿದ್ದರು. ಚೆರುವುಪಲ್ಲಿ ಬಳಿಯ ರೈಲು ಹಳಿ ದಾಟಲು ಅವರು ಯತ್ನಿಸಿದ್ದಾರೆ. ಆದ್ರೆ ಹಳಿ ಮಧ್ಯೆ ಟ್ರ್ಯಾಕ್ಟರ್ನ ಹಿಂದಿನ ಚಕ್ರ ಸಿಲುಕೊಂಡಿದೆ. ರೈತರು ಎಷ್ಟೇ ಪ್ರಯತ್ನಿಸಿದರೂ ಟ್ರ್ಯಾಕ್ಟರ್ ಹೊರಬರಲೇ ಇಲ್ಲ. ಸ್ಥಳೀಯರು 100ಕ್ಕೆ ಕರೆ ಮಾಡಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕ್ರಮ ಜರುಗಿಸಿದ್ದಾರೆ.
ಪಲ್ನಾಡು ಎಕ್ಸ್‌ಪ್ರೆಸ್ ಗುಂಟೂರಿನಿಂದ ಹೈದರಾಬಾದ್‌ಗೆ ಹೋಗುತ್ತಿತ್ತು. ಟ್ರ್ಯಾಕ್ಟರ್ ಟ್ರಾಲಿ ಸ್ಥಗಿತಗೊಂಡಿರುವ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ದೊರೆತ್ತಿತ್ತು. ಹೀಗಾಗಿ ಅಧಿಕಾರಿಗಳು ಪಲ್ನಾಡು ಎಕ್ಸ್‌ಪ್ರೆಸ್ ಅನ್ನು ಕುಕ್ಕಡಂ ರೈಲು ನಿಲ್ದಾಣದಲ್ಲಿ ಸ್ವಲ್ಪ ಸಮಯದವರೆಗೆ ನಿಲ್ಲಿಸಿದ್ದಾರೆ. ಬಳಿಕ ಜೆಸಿಬಿ ಸಹಾಯದಿಂದ ರೈಲು ಹಳಿ ಮೇಲೆ ಸಿಲುಕಿದ್ದ ಟ್ರ್ಯಾಕ್ಟರ್ ಅನ್ನು ಹೊರತೆಗೆಯಲಾಯಿತು.
ಇದನ್ನೂ ಓದಿ:ಕರ್ತವ್ಯನಿರತ ಪೊಲೀಸ್ ಕಾನ್ಸ್ಟೇಬಲ್ಗೆ ಕಾರು ಡಿಕ್ಕಿ: ಎದೆ ಝಲ್ಲೆನಿಸುವ ವಿಡಿಯೋ