ಆಮೆ ಆ‘ಲಿಂಗ’ನ.. ಭಗವಂತ ಮಹಾದೇವ-ವಿಷ್ಣು ಭೇಟಿ ಕ್ಯಾಮರಾದಲ್ಲಿ ಸೆರೆ - ಶಿವಲಿಂಗವನ್ನು ಆಮೆಯೊಂದು ಆಲಿಂಗಿಸಿರುವ ಅದ್ಭುತ ದೃಶ್ಯ
ಭಗವಂತ ವಿಷ್ಣುವು ಆಮೆಯ ಅವತಾರ ಎಂದು ಹೇಳಲಾಗುತ್ತದೆ. ಗುಜರಾತ್‌ನಲ್ಲಿ ಕಂಡು ಬಂದ ಈ ದೃಶ್ಯವು ಭಗವಂತ ವಿಷ್ಣು ನಿಜವಾಗಿಯೂ ಶಿವನನ್ನು ಭೇಟಿಯಾಗಲು ಬಂದಿದ್ದಾನೆ ಎಂಬುದಕ್ಕೆ ಸಾಕ್ಷಿಯಂತಿದೆ. ಜುನಾಗಢದ ಭವನಾಥದ ಮಹಾದೇವ ದೇವಸ್ಥಾನದಲ್ಲಿ ಶಿವಲಿಂಗವನ್ನು ಆಮೆಯೊಂದು ಆಲಿಂಗಿಸಿರುವ ಅಪರೂಪದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ನೋಡಲು ಸಾವಿರಾರೂ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಶಿವನ ಯಾವುದೇ ದೇವಾಲಯದ ಪ್ರವೇಶದ್ವಾರದಲ್ಲಿ ನಂದಿ ಮತ್ತು ಆಮೆಯ ಕಲ್ಲಿನಿಂದ ಕೆತ್ತಿರುವ ವಿಗ್ರಹಗಳನ್ನು ಕಾಣಬಹುದು. ಶಿವ ಭಕ್ತರು ದೇವಾಲಯವನ್ನು ಪ್ರವೇಶಿಸುವಾಗ ನಂದಿ ಮತ್ತು ಆಮೆಯ ದರ್ಶನವನ್ನು ತೆಗೆದುಕೊಳ್ಳುವುದನ್ನು ಗಮನಿಸಬಹುದು.
Last Updated : Feb 3, 2023, 8:37 PM IST