Tomato Price: 30 ಕೆಜಿ ಟೊಮೆಟೊ ಬಾಕ್ಸ್ ಮಾರಿದ್ರೆ 1 ಗ್ರಾಂ ಚಿನ್ನ ಖರೀದಿಸಬಹುದೆಂದ ರೈತರು! - madanapalle market 1 kg tomato price rs 168
ಮದನಪಲ್ಲಿ (ಆಂಧ್ರಪ್ರದೇಶ) : ಟೊಮೆಟೊ ಬೆಲೆ ಏರಿಕೆ ಜನರನ್ನು ಆತಂಕಕ್ಕೆ ದೂಡಿದೆ. ದಿನದಿಂದ ದಿನಕ್ಕೆ ದಾಖಲೆ ಮಟ್ಟದಲ್ಲಿ ದರ ಏರಿಕೆಯಾಗುತ್ತಿದೆ. ಸದ್ಯಕ್ಕೆ ದೇಶಾದ್ಯಂತ ಮಳೆಯಿಂದಾಗಿ ಟೊಮೆಟೊ ಇಳುವರಿ ಕಡಿಮೆಯಾಗಿದೆ. ಇದರಿಂದ ಮದನಪಲ್ಲಿಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೊಮೆಟೊ ಕೆಜಿಗೆ 168 ರೂ.ಗೆ ಮಾರಾಟವಾಗುತ್ತಿದೆ.
ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಮಾರುಕಟ್ಟೆಯಲ್ಲಿ ಬುಧವಾರ ಟೊಮೆಟೊ ಬೆಲೆ ದಾಖಲೆಯ ಮಟ್ಟ ತಲುಪಿತು. ದೇಶದ ಹಲವು ರಾಜ್ಯಗಳಲ್ಲಿ ಸಂಭವಿಸಿರುವ ಅತಿವೃಷ್ಟಿ ಮತ್ತು ಬೆಳೆಗೆ ಸೋಂಕು ತಗುಲಿರುವುದರಿಂದ ಇಳುವರಿ ಕಡಿಮೆಯಾಗಿದೆ. ಹಾಗಾಗಿ, ಬುಧವಾರ ಮದನಪಲ್ಲಿಯ ಮಾರುಕಟ್ಟೆಗೆ ಕೇವಲ 361 ಟನ್ ಟೊಮೆಟೊ ಬಂದಿದ್ದು, ಕಳೆದ ಒಂದು ವಾರದಿಂದ ಇಳುವರಿ ಗಣನೀಯವಾಗಿ ಇಳಿಮುಖವಾಗಿದೆ ಎಂದು ಮಾರುಕಟ್ಟೆ ಯಾರ್ಡ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಒಂದು ಕಿಲೋ ಟೊಮೆಟೊ ಬೆಲೆ ಒಂದು ಕೆಜಿ ಸೇಬಿನ ಬೆಲೆಗೆ ಸಮವಾಗಿದೆ. 30 ಕೆಜಿಯ ಟೊಮೆಟೊ ಬಾಕ್ಸ್ ಮಾರಾಟ ಮಾಡಿದ್ರೆ ಒಂದು ಗ್ರಾಂ ಚಿನ್ನ ಖರೀದಿಸಬಹುದು" ಎಂಬುದು ರೈತರ ಅಭಿಪ್ರಾಯ.
ಇದನ್ನೂ ಓದಿ :ಕೇವಲ ಅರ್ಧ ಎಕರೆ ಜಮೀನು.. ಬರೋಬ್ಬರಿ ₹ 11 ಲಕ್ಷ ಆದಾಯ.. ಹುಕ್ಕೇರಿ ರೈತನ ಅದೃಷ್ಟ ಬದಲಿಸಿದ ಕಿಚನ್ ಕ್ವೀನ್!