ಟೋಲ್ ನಲ್ಲಿ ಸ್ಕ್ಯಾನ್ ಆಗದ ಫಾಸ್ಟ್ ಟ್ಯಾಗ್: ಬಿಎಂಟಿಸಿ ಬಸ್ ತಡೆದ ಟೋಲ್ ಸಿಬ್ಬಂದಿ - ಈಟಿವಿ ಭಾರತ ಕನ್ನಡ
ಯಲಹಂಕ : ಬಿಎಂಟಿಸಿ ಬಸ್ಸುಗಳಲ್ಲಿ ಅಳವಡಿಸಿರುವ ಫಾಸ್ಟ್ ಟ್ಯಾಗ್ ಸರಿಯಾಗಿ ಸ್ಕ್ಯಾನ್ ಆಗುತ್ತಿಲ್ಲ ಎಂದು ಮಾರಸಂದ್ರ ಟೋಲ್ ಸಿಬ್ಬಂದಿ ಬಸ್ ತಡೆದಿರುವ ಘಟನೆ ನಡೆದಿದೆ. ಇದರಿಂದ ಪ್ರಯಾಣಿಕರು ಕೆಲಕಾಲ ನಡುರಸ್ತೆಯಲ್ಲಿ ಪರದಾಡುವಂತಾಯಿತು.
ಬಿಎಂಟಿಸಿ ಬಸ್ನಲ್ಲಿನ ಫಾಸ್ಟ್ ಟ್ಯಾಗ್ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಬಿಎಂಟಿಸಿ ಅಧಿಕಾರಿಗಳಿಗೆ ತಿಳಿಸಿದರೂ ಏನೂ ಕ್ರಮ ಕೈಗೊಂಡಿಲ್ಲ. ಹಾಗಾಗಿ ಬಸ್ ತಡೆದಿದ್ದೇವೆ ಎಂದು ಟೋಲ್ ವ್ಯವಸ್ಥಾಪಕ ರವಿ ಬಾಬು ತಿಳಿಸಿದ್ದಾರೆ. ಬಿಎಂಟಿಸಿ ಬಸ್ ತಡೆದಿದ್ದರಿಂದ ವಿದ್ಯಾರ್ಥಿಗಳು, ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು. ಬಳಿಕ ಬಿಎಂಟಿಸಿ ಹಿರಿಯ ಅಧಿಕಾರಿಗಳು ಟೋಲ್ ವ್ಯವಸ್ಥಾಪಕರಿಗೆ ಕರೆ ಮಾಡಿ, ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ ನಂತರ ಬಸ್ಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಇದನ್ನೂ ಓದಿ :ವಿಡಿಯೋ ನೋಡಿ... ಅಜ್ಮೀರ್ನ ಸಂತ ಖ್ವಾಜಾ ಗರೀಬ್ ದರ್ಗಾಕ್ಕೆ ರೆಡ್ಡಿ ಭೇಟಿ.!
TAGGED:
ಫಾಸ್ಟ್ ಟ್ಯಾಗ್