ವಿಡಿಯೋ: ಹುಣಸೂರಿನಲ್ಲಿ ಹೊತ್ತಿ ಉರಿದ ತಂಬಾಕು ಬ್ಯಾರೆನ್.. - ಮೈಸೂರಿನಲ್ಲಿ ಹೊತ್ತಿ ಉರಿದ ತಂಬಾಕು ಬ್ಯಾರೆನ್
ತಂಬಾಕು ಹದಗೊಳಿಸುವ ಬ್ಯಾರೆನ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬ್ಯಾರೆನ್ ಸುಟ್ಟು ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಗಾವಡ ಗೆರೆ ಹೋಬಳಿಯ ಲಕ್ಕನ ಕೊಪ್ಪಲು ಗ್ರಾಮದ ರೈತ ನಾಗೇಗೌಡ ಎಂಬುವವರಿಗೆ ಸೇರಿದ ತಂಬಾಕ್ ಬ್ಯಾರೇನ್ಗೆ ಬೆಂಕಿ ಆಕಸ್ಮಿಕವಾಗಿ ಕಾಣಿಸಿಕೊಂಡು ಡಬಲ್ ಬ್ಯಾರೆನ್ ಸುಟ್ಟು ಹೋಗಿದೆ. ಬ್ಯಾರೆನ್ನಲ್ಲಿ ಸುಮಾರು 3 ಲಕ್ಷದ ಹೊಗೆ ಸೊಪ್ಪು ಇತ್ತು ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿದ ಅಗ್ನಿ ಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
Last Updated : Feb 3, 2023, 8:24 PM IST