ತಮಿಳುನಾಡು ಸರ್ಕಾರದ ಡಿಎಂಕೆ ಫೈಲ್ಸ್-2 ವಿಡಿಯೋ ಬಿಡುಗಡೆ ಮಾಡಿದ ಅಣ್ಣಾಮಲೈ: ವಿಡಿಯೋ - tamilnadu bjp chief k annamalai
ಚೆನ್ನೈ:ತಮಿಳುನಾಡಿನ ಸ್ಟಾಲಿನ್ ಸರ್ಕಾರ ಮತ್ತು 11 ಡಿಎಂಕೆ ನಾಯಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ 5600 ಕೋಟಿ ರೂಪಾಯಿ ಭ್ರಷ್ಟಾಚಾರ ಆರೋಪ ಮಾಡಿದ್ದರು. ಈ ಕುರಿತು ಡಿಎಂಕೆ ಫೈಲ್ಸ್-1 ಎಂಬ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಇದೀಗ ಡಿಎಂಕೆ ಫೈಲ್ಸ್-2 ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಸಂಬಂಧಿತ ದಾಖಲೆಗಳನ್ನು ರಾಜ್ಯಪಾಲ ಆರ್.ಎನ್.ರವಿ ಅವರಿಗೆ ನೀಡಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಡಿಎಂಕೆ ಫೈಲ್ಸ್-2 ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 16 ನಿಮಿಷಗಳ ಈ ವಿಡಿಯೋದಲ್ಲಿ ಸರ್ಕಾರದ ಹಲವು ಇಲಾಖೆಗಳಲ್ಲಿ ಎಷ್ಟೆಲ್ಲಾ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ತೋರಿಸಲಾಗಿದೆ. ಇದರಲ್ಲಿ ಭಾಗಿಯಾದ ಡಿಎಂಕೆ ನಾಯಕರು, ಸಚಿವರ ಫೋಟೋ ಕೂಡ ಇದರಲ್ಲಿದೆ.
ಡಿಎಂಕೆ ಸರ್ಕಾರದ ವಿರುದ್ಧ ಕಹಳೆ ಊದಿರುವ ಅಣ್ಣಾಮಲೈ ಬಿಜೆಪಿಯ ಅಭಿವೃದ್ಧಿ ಕಾರ್ಯಸೂಚಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಜುಲೈ 28 ರಂದು ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂನಿಂದ ಚೆನ್ನೈಗೆ ಪಾದಯಾತ್ರೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಡಿಎಂಕೆ ಫೈಲ್ಸ್ ವಿಡಿಯೋ ಬಿಡುಗಡೆಯ ಬಳಿಕ ಅಣ್ಣಾಮಲೈ ವಿರುದ್ಧ ಡಿಎಂಕೆ ನಾಯಕರು ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ಇದನ್ನೂ ಓದಿ:ವೇದಗಂಗಾ ನದಿ ನೀರಿನ ಮಟ್ಟದಲ್ಲಿ ಮತ್ತೆ ಹೆಚ್ಚಳ: ಹಲವು ಬೆಳೆಗಳು ಜಲಾವೃತ