ಕರ್ನಾಟಕ

karnataka

ಬಾಗಲಕೋಟೆಯಲ್ಲಿ ಗಮನ ಸೆಳೆದ ತಿರಂಗಾ ಯಾತ್ರೆ - ವಿಡಿಯೋ

ETV Bharat / videos

ಬಾಗಲಕೋಟೆಯಲ್ಲಿ ಗಮನ ಸೆಳೆದ ತಿರಂಗ ಯಾತ್ರೆ - ವಿಡಿಯೋ - Independence day

By

Published : Aug 14, 2023, 6:23 PM IST

ಬಾಗಲಕೋಟೆ: 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ತಿರಂಗ ಯಾತ್ರೆ ನಡೆಯಿತು. ಸುಮಾರು ಒಂದು ಸಾವಿರ ಮೀಟರ್​ ಉದ್ದದ ತ್ರಿವರ್ಣ ಧ್ವಜದ ರ‍್ಯಾಲಿ ಕಣ್ಮನ ಸೆಳೆಯಿತು. ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಯಾತ್ರೆಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನೆ ಮನೆಯಲ್ಲಿ ತಿರಂಗ ಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರ ಪ್ರೇಮ ಬೆಳೆಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಡೀ ವಿಶ್ವಕ್ಕೆ ಭಾರತ ದೇಶದ ಮಹತ್ವ ಏನು ಎಂಬುದನ್ನು ತಿಳಿಸಿದ್ದಾರೆ. ಇಡೀ ಜಗತ್ತೇ ಭಾರತ ದೇಶವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು ಹೇಳಿದರು.

ಇಂಜಿನಿಯರಿಂಗ್​ ಕಾಲೇಜು ಸರ್ಕಲ್​ನಿಂದ ಪ್ರಾರಂಭಗೊಂಡ ಯಾತ್ರೆಯು ವಿದ್ಯಾಗಿರಿಯ ಪ್ರಮುಖ ರಸ್ತೆಯಲ್ಲಿ ಸಂಚರಿಸಿ, ಪುನಃ ಇಂಜಿನಿಯರಿಂಗ್​ ಕಾಲೇಜ ಸರ್ಕಲ್​ನಲ್ಲಿ ಸಮಾರೋಪಗೊಂಡಿತು. ಸಾವಿರ ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜ ಮೆರವಣಿಗೆಯಲ್ಲಿ, ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ರಾಷ್ಟ್ರಧ್ವಜ ಹಿಡಿದು‌ ಭಾಗವಹಿಸಿ ಭಾರತ ಮಾತಾ ಕೀ ಜೈ ಸೇರಿದಂತೆ, ದೇಶಾಭಿಮಾನ ಮೂಡಿಸುವ ಘೋಷಣೆ ಕೂಗಿದರು.

ತಿರಂಗ ಯಾತ್ರೆಯಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಜಿ.ಎನ್. ಪಾಟೀಲ, ರಾಜು ನಾಯ್ಕರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ:77th Independence day: 1500 ಅಡಿ ಉದ್ದದ ತ್ರಿವರ್ಣ ಧ್ವಜದ ರಂಗೋಲಿ ರಚಿಸಿ ದೇಶ ಪ್ರೇಮ ಮೆರೆದ ವಿದ್ಯಾರ್ಥಿಗಳು

ABOUT THE AUTHOR

...view details