ವಿಡಿಯೋ: ವಿಜಯಪುರದಲ್ಲಿ ಬೃಹತ್ ತಿರಂಗಾ ಯಾತ್ರೆ - 75th Independence Amrita Mahotsava
ವಿಜಯಪುರ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನವನ್ನ ಜಿಲ್ಲೆಯ ಬಬಲೇಶ್ವರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬೃಹತ್ ತಿರಂಗಾ ಯಾತ್ರೆಗೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಚಾಲನೆ ನೀಡಿದರು. ಶಾಂತವೀರ್ ಸರ್ಕಲ್ ನಿಂದ ಆರಂಭಗೊಂಡ ಜಾಥಾ ಯಾಳಕಟ್ಟಿ ಮತ್ತು ಅಂಬೇಡ್ಕರ ವೃತ್ತದ ವರೆಗೂ ಸಾಗಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಯುವಕರು ಭಾರತ್ ಮಾತಾ ಕೀ ಜೈ ಎನ್ನುವ ಜಯಘೋಷ ಕೂಗಿ ತಿರಂಗಾ ಯಾತ್ರೆ ಮೆರಗು ಹೆಚ್ಚಿಸಿದರು.
Last Updated : Feb 3, 2023, 8:26 PM IST