ಕಾರವಾರದಲ್ಲಿ ಟಿಪ್ಪರ್ ಟೈರ್ ಸ್ಫೋಟ.. ಹೊತ್ತಿ ಉರಿದ ವಾಹನ - ಕಾರವಾರದಲ್ಲಿ ಟಿಪ್ಪರ್ ಟೈರ್ ಸ್ಫೋಟ
ಕಾರವಾರ: ರಸ್ತೆ ಡಾಂಬರೀಕರಣಕ್ಕೆ ಜೆಲ್ಲಿ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಟೈರ್ ಸ್ಫೋಟಗೊಂಡು ಸಂಪೂರ್ಣ ವಾಹನ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಮಂಗಳವಾರ ಸಂಜೆ ಸಿದ್ದಾಪುರದಿಂದ ಕುಮಟಾದ ಸಾಂತಗಲ್ ಬಳಿ ನಡೆಯುತ್ತಿರುವ ರಸ್ತೆ ಡಾಂಬರೀಕರಣಕ್ಕೆ ಜಲ್ಲಿ ಕಲ್ಲುಗಳನ್ನು ತುಂಬಿಕೊಂಡು ದೊಡ್ಮನೆ ಘಟ್ಟದಲ್ಲಿ ತೆರಳುವಾಗ ಹುಲ್ದಾರ್ ಗದ್ದೆ ಬಳಿಯ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಟೈರ್ ಸ್ಫೋಟಗೊಂಡಿದೆ. ಇದು ಮುರುಡೇಶ್ವರ ಮೂಲದ ಮಾಲೀಕನ ಟಿಪ್ಪರ್ ಎನ್ನಲಾಗ್ತಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟ್ಟ ಪ್ರದೇಶದಿಂದ ಇಳಿದು ಬಂದಿದ್ದರಿಂದ ಒಮ್ಮೆಲೆ ಬೆಂಕಿ ಹೊತ್ತಿಕೊಂಡಿದ್ದು, ನಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಟಿಪ್ಪರ್ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
Last Updated : Feb 3, 2023, 8:31 PM IST