ಕಾರಿನ ಮುಂಭಾಗ ಎಡವಿ ಬಿದ್ದ ಪುಟ್ಟ ಮಗು.. ಫೋನ್‌ನಲ್ಲಿ ಮಾತನಾಡುತ್ತಲೇ ಕಂದನ ಮೇಲೆ ವಾಹನ ಹರಿಸಿದ ಚಾಲಕ! - ಲೂಧಿಯಾನದಲ್ಲಿ ಚಾಲಕನ ನಿರ್ಲಕ್ಷ್ಯ ಬಲಿಯಾಯ್ತು ಮಗು
ಆಘಾತಕಾರಿ ಘಟನೆಯೊಂದರಲ್ಲಿ ಚಾಲಕನೊಬ್ಬ ಫೋನ್‌ನಲ್ಲಿ ಮಾತನಾಡುತ್ತಾ ನಿರ್ಲಕ್ಷ್ಯದಿಂದ ಮಗುವೊಂದರ ಮೇಲೆ ಕಾರನ್ನು ಚಲಾಯಿಸಿ ಬಲಿ ಪಡೆದಿರುವ ಘಟನೆ ಪಂಜಾಬ್ನ ಲೂಧಿಯಾನದ ಶಹೀದ್ ಕರ್ನೈಲ್ ಸಿಂಗ್ ನಗರದಲ್ಲಿ ನಡೆದಿದೆ. ಈ ಘಟನೆ ಕುರಿತು ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕನ ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದಕ್ಕಾಗಿ ಮಗು ಸಾವನ್ನಪ್ಪಿದೆ ಎಂದು ನೆಟ್ಟಿಗರು ಆರೋಪ ಮಾಡುತ್ತಿದ್ದಾರೆ. ಅಕ್ಕ - ತಂಗಿ ಇಬ್ಬರು ಮನೆಯ ಬಳಿಯ ಅಂಗಡಿಗೆ ಹೋಗಿದ್ದಾರೆ. ಈ ವೇಳೆ, ತಂಗಿ ನೆಲಕ್ಕೆ ಬಿದ್ದಿದ್ದಾಳೆ. ಅಕ್ಕ ಆಕೆಯನ್ನು ಕರೆದೊಯ್ಯಲು ಯತ್ನಿಸುತ್ತಿರುವಾಗ ಚಾಲಕ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ ಮಗುವಿನ ತಲೆ ಮೇಲೆ ಕಾರಿನ ಟೈರ್ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಗುವಿನ ಸಂಬಂಧಿಕರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ತಪ್ಪಿತಸ್ಥ ಚಾಲಕನ ವಿರುದ್ಧ ಕ್ರಮಕ್ಕೆ ಮೃತ ಮಗುವಿನ ಪೋಷಕರು ಒತ್ತಾಯಿಸಿದ್ದಾರೆ.
Last Updated : Feb 3, 2023, 8:23 PM IST