ದಮ್ಮನಕಟ್ಟೆ ಸಫಾರಿಯಲ್ಲಿ ತಾಯಿ ಜೊತೆ ಕಾಣಿಸಿಕೊಂಡ ಹುಲಿ ಮರಿಗಳು.. ಪ್ರವಾಸಿಗರು ಖುಷ್ - ತಾಯಿ ಜೊತೆ ಕಾಣಿಸಿಕೊಂಡ ಹುಲಿ ಮರಿಗಳು
ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ದಮ್ಮನಕಟ್ಟೆ ಅರಣ್ಯದಲ್ಲಿ ಸಫಾರಿಗೆ ಹೊರಟ ಪ್ರವಾಸಿಗರಿಗೆ ಇಂದು ಬೆಳಗ್ಗೆ 9 ಕಡೆ ಹುಲಿ ಮತ್ತು ಹುಲಿ ಮರಿಗಳು ಪ್ರತ್ಯಕ್ಷವಾಗಿದ್ದು, ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.
ತಿಂಗಳ ಹಿಂದೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಳೆ ಆಗಿದೆ. ಈ ಮಳೆಗೆ ನಾಗರಹೊಳೆ ಅಭಯಾರಣ್ಯ ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರಾಣಿಗಳು ಖುಷಿಯಿಂದ ಓಡಾಡುತ್ತಿವೆ.
ನಿನ್ನೆ ತಾನೆ ಎಚ್ ಡಿ ಕೋಟೆಯ ದಮ್ಮನಕಟ್ಟೆ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರಿಗೆ ಹಲವು ದಿನಗಳ ನಂತರ ಕಪ್ಪು ಚಿರತೆ ಕಾಣಿಸಿಕೊಂಡಿತ್ತು. ಇದರೊಂದಿಗೆ ಆನೆಗಳ ಹಿಂಡು, ಜಿಂಕೆಗಳ ಹಿಂಡು ಸಫಾರಿಗೆ ಬಂದ ಪ್ರವಾಸಿಗರಿಗೆ ದರ್ಶನ ನೀಡುತ್ತಿವೆ. ಇಂದು ಬೆಳಗ್ಗೆ ದಮ್ಮನಕಟ್ಟೆ ಸಫಾರಿ ಕೇಂದ್ರದಲ್ಲಿ ಸಫಾರಿಗೆ ತೆರಳಿದ್ದ ಮಹಾವೀರ್ ಜೈನ ಎಂಬ ಹವ್ಯಾಸಿ ಛಾಯಾಗ್ರಾಹಕನ ಕ್ಯಾಮರಾದಲ್ಲಿ 9 ಕಡೆ ಹುಲಿ ಮತ್ತು ಮರಿಗಳು ಸೆರೆಯಾಗಿವೆ. ಸಫಾರಿಗೆ ಬಂದ ಪ್ರವಾಸಿಗರಿಗೆ ಸಹ ಹುಲಿ ಮತ್ತು ಹುಲಿ ಮರಿಗಳು ದರ್ಶನ ನೀಡಿದ್ದು, ಅವರು ಸಂತಸಗೊಂಡಿದ್ದಾರೆ.
ಇದನ್ನೂ ಓದಿ:ಫೋಟೋ ತೆಗೆಯಲು ಕಾಡಿನೊಳಗೆ ಹೋದ ಯುವಕನ ಬೆನ್ನಟ್ಟಿದ ಆನೆ: ವಿಡಿಯೋ