ಕರ್ನಾಟಕ

karnataka

ಗೋಪಾಲಸ್ವಾಮಿ ಬೆಟ್ಟದಲ್ಲಿ ಮಳೆ ನಡುವೆ ಹುಲಿ ಬೇಟೆ

ETV Bharat / videos

Tiger hunts Bison: ಗೋಪಾಲಸ್ವಾಮಿ ಬೆಟ್ಟದಲ್ಲಿ ಮಳೆ ನಡುವೆ ಕಾಡೆಮ್ಮೆ ಬೇಟೆಯಾಡಿದ ಹುಲಿ- ವಿಡಿಯೋ - ಹಿಮವದ್​ ಗೋಪಾಲಸ್ವಾಮಿ ಬೆಟ್ಟ

By

Published : Jul 27, 2023, 1:00 PM IST

ಚಾಮರಾಜನಗರ:ರಾಜ್ಯದ ಪ್ರಮುಖ ಪ್ರವಾಸಿತಾಣಗಳಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್​ ಗೋಪಾಲಸ್ವಾಮಿ ಬೆಟ್ಟ ಕೂಡ ಒಂದು. ಇಲ್ಲಿ ಕಾಡುಪ್ರಾಣಿಗಳು ಕಂಡುಬರುವುದು ಸಾಮಾನ್ಯ. ಇದೇ ಪರಿಸರದಲ್ಲಿ ಹುಲಿಯೊಂದು ಕಾಡೆಮ್ಮೆ ಮಾಂಸವನ್ನು ಕಿತ್ತು ತಿನ್ನುತ್ತಿರುವ ದೃಶ್ಯ ಜನರನ್ನು ರೋಮಾಂಚನಗೊಳಿಸಿದೆ. 

ಜನರು ಗೋಪಾಲಸ್ವಾಮಿ ಬೆಟ್ಟದಿಂದ ಹಿಂತಿರುಗುವಾಗ ಗುಡ್ಡದಲ್ಲಿ, ಕಾಡೆಮ್ಮೆಯ ತಲೆಭಾಗವನ್ನು ಹುಲಿರಾಯ ಕಿತ್ತು ಎಳೆದೊಯ್ಯುತ್ತಿರುವ ದೃಶ್ಯ ಕಂಡುಬಂದಿದೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಬಸ್ಸಿನಲ್ಲಿ ಬೆಟ್ಟಕ್ಕೆ ತೆರಳುವಾಗ ಈ ಹುಲಿ ಆಗಾಗ ಭಕ್ತರಿಗೆ ಕಾಣಿಸಿಕೊಳ್ಳಲಿದ್ದು, ಬೆಟ್ಟದ ಹುಲಿ ಎಂದೇ ಫೇಮಸ್​ ಆಗಿದೆ.

ಹಿಮವದ್​ ಗೋಪಾಲಸ್ವಾಮಿ ಬೆಟ್ಟವು ಸದಾ ಹಿಮದಿಂದಲೇ ಆವೃತವಾಗಿರುತ್ತದೆ. ಇದು ಜನರಿಗೆ ಕರ್ನಾಟಕದ ಕಾಶ್ಮೀರದಂತೆ ಭಾಸವಾಗುತ್ತದೆ. ಸದ್ಯ ಮಳೆಯ ಜೊತೆಗೆ ಹಿಮದಿಂದ ಕೂಡಿರುವ ಈ ಬೆಟ್ಟಕ್ಕೆ ದಿನಿನಿತ್ಯ ಜನಸಾಗರವೇ ಹರಿದು ಬರುತ್ತದೆ. ಈ ವೇಳೆ ಸುಂದರ ಪ್ರಕೃತಿ ಸೌಂದರ್ಯದ ಜೊತೆಗೆ ಹುಲಿ ದರ್ಶನವೂ ಆಗಿರುವುದು ಭಕ್ತರನ್ನು ಮುದಗೊಳಿಸಿದೆ.  

ಇದನ್ನೂ ಓದಿ:ನಂಜನಗೂಡಿನಲ್ಲಿ ಸ್ನಾನಘಟ್ಟ ಮುಳುಗಡೆ; ಡ್ರೋನ್​​ ಕಣ್ಣಿನಲ್ಲಿ ಕಬಿನಿ ಜಲಾಶಯದ ದೃಶ್ಯ- ವಿಡಿಯೋ

ABOUT THE AUTHOR

...view details