ಗ್ರಾಮಕ್ಕೆ ನುಗ್ಗಿ ಮಹಿಳೆ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆ: ವಿಡಿಯೋ
ಬೆಟ್ಟಿಯಾ(ಬಿಹಾರ): ಪಶ್ಚಿಮ ಚಂಪಾರಣ್ಯದ ವಾಲ್ಮೀಕಿ ಹುಲಿ ಮೀಸಲು ಪ್ರದೇಶದಿಂದ ಬಂದಿರುವ ಹುಲಿ ಜನನಿಬಿಡ ಪ್ರದೇಶಕ್ಕೆ ನುಗ್ಗಿರುವ ಘಟನೆ ಗೋನಾಹಾ ಬ್ಲಾಕ್‌ನಲ್ಲಿರುವ ನವಕಾ ಗ್ರಾಮದಲ್ಲಿ ನಡೆದಿದೆ. ಹುಲಿ ಕಾಣಿಸಿಕೊಂಡ ಸುದ್ದಿ ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿತ್ತು. ವಾಲ್ಮೀಕಿ ಹುಲಿ ಮೀಸಲು ಅರಣ್ಯ ಮಂಗುರಾಹ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದೆ.
ಗುರುವಾರ ಬೆಳಗ್ಗೆ ವಿಟಿಆರ್‌ನಿಂದ ಹುಲಿ ಹೊರಬಂದು ಗ್ರಾಮಕ್ಕೆ ನುಗ್ಗಿದೆ ಎನ್ನಲಾಗಿದೆ. ಈ ವೇಳೆ ಹುಲಿ ಮನೆಯಲ್ಲಿದ್ದ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದೆ. ಈ ಘಟನೆಯಿಂದ ಇಡೀ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಹುಲಿಯನ್ನು ಸೆರೆ ಹಿಡಿಯಲು ಯಶಸ್ವಿಯಾಗಿದ್ದಾರೆ. ಹುಲಿ ವಿಟಿಆರ್‌ನಿಂದ ಹೊರಬಂದು ಜನವಸತಿ ಪ್ರದೇಶಕ್ಕೆ ನುಗ್ಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಅರಣ್ಯದಿಂದ ಹೊರಬಂದ ಹುಲಿಗಳು ಜನರ ಮೇಲೆ ದಾಳಿ ನಡೆದ್ದವು. ಇನ್ನು ಹುಲಿ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ:ಮೈ ಮೇಲೆಲ್ಲ ಸಿದ್ದು, ಹುಲಿಯಾ ಎಂದು ಬರೆಸಿಕೊಂಡ ಕೊಳ್ಳೇಗಾಲದ ಅಭಿಮಾನಿ!