ಎಟಿಎಂನಿಂದ ಹಣ ತೆಗೆಯುವವರೆಗೂ ಹಿಂಬದಿ ನಿಂತು ಆಮೇಲೆ ದರೋಡೆ ಮಾಡಿದ ಗ್ಯಾಂಗ್! - ಗುಜರಾತ್‌ನಲ್ಲಿ ವ್ಯಕ್ತಿಯ ಲೂಟಿ
ಗುಜರಾತ್ನ ಸೂರತ್‌ನ ಸಚಿನ್ ಜಿಐಡಿಸಿ ಪ್ರದೇಶದ ಎಟಿಎಂನಲ್ಲಿ ಸಚಿನ್ ಪಾಲಿಗಾಂ ನಿವಾಸಿ ಚಂದನ್‌ಕುಮಾರ್ ಶ್ಯಾಮದೇವ್ ಪ್ರಸಾದ್ ಚೌರಾಸಿಯಾ ಹಣ ತೆಗೆದುಕೊಳ್ಳುತ್ತಿದ್ದರು. ಈ ವೇಳೆ, ಎಟಿಎಂಗೆ ನುಗ್ಗಿದ ಮೂವರು ದರೋಡೆಕೋರರು ಚಂದನ್ಗೆ ಚಾಕು ಮೊಬೈಲ್ ಸೇರಿ 1.92 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ಘಟನೆಯ ನಂತರ ಸಚಿನ್ ಜಿಐಡಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಇಡೀ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
Last Updated : Feb 3, 2023, 8:23 PM IST