ಗಂಗೋತ್ರಿ ಧಾಮದಿಂದ ದಂಡವತ್ ಯಾತ್ರೆ ಆರಂಭಿಸಿದ ಮೂವರು ಸಾಧುಗಳು! - etv bharat kannada
ಉತ್ತರಕಾಶಿ (ಉತ್ತರಖಂಡ) : ಮಾನವ ಕಲ್ಯಾಣಕ್ಕಾಗಿ ಮಧ್ಯಪ್ರದೇಶದ ಲೋಕಧಾಮ ಗಂಗಾಪುರ ಮೊರೆನದ ದಾಮೋದರ್ ದಾಸ್, ಕೌಶಲ್ ದಾಸ್ ಮತ್ತು ಮೋನಿ ಬಾಬಾ ಅವರು ಉತ್ತರಕಾಶಿಯ ಗಂಗೋತ್ರಿ ಧಾಮದಿಂದ ದಂಡ ನಮಸ್ಕಾರದ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಮೂವರು ಸಾಧುಗಳು ಗಂಗಾಜಲದೊಂದಿಗೆ ಸೇತುಬಂದ್ ರಾಮೇಶ್ವರಂ ಧಾಮಕ್ಕೆ ತೆರಳಿದ್ದಾರೆ. ಮಳೆಯ ನಡುವೆಯೂ ಗಂಗೋತ್ರಿ ಹೆದ್ದಾರಿಯಲ್ಲಿ ಮೂವರು ಸಾಧುಗಳ ಪ್ರಯಾಣ ಮುಂದುವರಿದಿದೆ. ಜುಲೈ 29 ರಂದು ಮೂವರು ಸಾಧುಗಳು ಗಂಗಾಜಲವನ್ನು ತುಂಬುವ ಮೂಲಕ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದರು. ಯಾತ್ರೆ ಮುಗಿದ ನಂತರ ತಮಿಳುನಾಡಿನ ಸೇತುಬಂದ್ ರಾಮೇಶ್ವರಂ ಧಾಮದಲ್ಲಿ ಜಲಾಭಿಷೇಕ ನಡೆಯಲಿದೆ.
Last Updated : Feb 3, 2023, 8:25 PM IST