Watch.. ಪಾಳು ಬಿದ್ದ ಮನೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ - ಈಟಿವಿ ಭಾರತ ಕನ್ನಡ
ಬಾಗೇಶ್ವರ್ (ಉತ್ತರಾಖಂಡ): ಇತ್ತೀಚೆಗಷ್ಟೇ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ನಮೀಬಿಯಾದಿಂದ ತರಲಾದ ಹೆಣ್ಣು ಚೀತಾವೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿತ್ತು. ಇದೀಹ ಇಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ. ಬಾಗೇಶ್ವರ ಜಿಲ್ಲೆಯ ಗರುಡ್ ತಹಸಿಲ್ ಗ್ರಾಮದಲ್ಲಿ ಪಾಳು ಬಿದ್ದ ಮನೆಯೊಂದರಲ್ಲಿ ಮೂರು ಹೆಣ್ಣು ಚಿರತೆ ಮರಿಗಳು ಪತ್ತೆಯಾಗಿವೆ.
ಆರೋಗ್ಯವಂತವಾಗಿರುವ ಮೂರು ಮರಿಗಳು ಮನೆಯಲ್ಲಿ ಕಾಣಿಸಿಕೊಂಡಿವೆ. ಇವುಗಳನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ಕೂಡಲೇ ವಿಷಯವನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯಧಿಕಾರಿಗಳು ಚಿರತೆ ಮರಿಗಳನ್ನು ತಾಯಿಯೊಂದಿಗೆ ಸೇರಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ. ಅಲ್ಲದೇ ತಾಯಿ ಚಿರತೆ ಗ್ರಾಮದ ಅಕ್ಕ ಪಕ್ಕದಲಿರುವ ಸಾಧ್ಯತೆ ಹೆಚ್ಚಿದ್ದ ಮನೆಯ ಬಳಿ ಯಾರು ಬರದಂತೆ ಗ್ರಾಮಸ್ಥರಿಗೆ ಸೂಚಿಸಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಮೂರು ಚಿರತೆ ಮರಿಗಳ ಪೈಕಿ 2 ಮರಿಗಳನ್ನು ತಾಯಿ ಚಿರತೆ ಬೇರೊಂದು ಸ್ಥಳಕ್ಕೆ ಕೊಂಡೊಯ್ದಿದೆ. ಇನ್ನೊಂದು ಮರಿ ಚಿರತೆ ಮನೆಯಲ್ಲೇ ಉಳಿದಿದ್ದು, ಅದನ್ನು ಸಹ ತಾಯಿ ಚಿರತೆ ಕೊಂಡೊಯ್ಯಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಮರಿ ಚಿರತೆಗಳ ವಿಡಿಯೋ ಬಾರಿ ವೈರಲ್ ಆಗಿದೆ.
ಇದನ್ನೂ ಓದಿ:ಕಬ್ಬಿನ ಗದ್ದೆಯಲ್ಲಿ3 ಚಿರತೆ ಮರಿ ಪತ್ತೆ: ಮರಿಗಳನ್ನ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದ ತಾಯಿ..