ಜಮ್ಮುವಿನ ರಾಜೌರಿಯಲ್ಲಿ ಕಂದಕಕ್ಕೆ ಉರುಳಿದ ಮಿನಿ ಬಸ್; ಮೂವರು ಸಾವು, 18 ಮಂದಿಗೆ ಗಾಯ - ಜಮ್ಮು ಮತ್ತು ಕಾಶ್ಮೀರ
Published : Nov 6, 2023, 7:52 PM IST
ರಾಜೌರಿ(ಜಮ್ಮು ಮತ್ತು ಕಾಶ್ಮೀರ):ರಾಜೌರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಜೌರಿ ಜಿಲ್ಲೆಯ ಕೊಟ್ರಂಕಾದಲ್ಲಿ ಮಿನಿ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಜತೆಗೆ ಘಟನೆಯಲ್ಲಿ18 ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ಪ್ರಕಾರ, ಅಪಘಾತಕ್ಕೀಡಾದ ಮಿನಿ ಬಸ್ ರಾಜೌರಿ ಜಿಲ್ಲೆಯ ಕೊಟ್ರಂಕಾದಿಂದ ರೌರಿ ಕಡೆಗೆ ತೆರಳುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಬಸ್ ಕೊಟ್ರಂಕಾದಲ್ಲಿ ದೊಡ್ಡ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯರು, ಪೊಲೀಸರು, ಮತ್ತು ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗಾಗಿ ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಘಟನೆ ಕುರಿತು ಜಿಎಂಸಿ ರಾಜೌರಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮಹ್ಮದ್ ಹುಸೇನ್ ಮಾಧ್ಯಮಗಳೊಂದಿಗೆ ಮಾತನಾಡಿ, ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಮುಂದುವರೆದಿದೆ. ಮತ್ತು ಅವರ ಆರೋಗ್ಯ ಕಡೆಗೆ ಸಂಪೂರ್ಣ ಗಮನವನ್ನು ನೀಡಲಾಗುತ್ತಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ವೈದ್ಯರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಇನ್ನು ಘಟನೆಯಲ್ಲಿ ಗಾಯಗೊಂಡವರು ನರಳಾಡುತ್ತಿದ್ದರೆ, ಸಾವನ್ನಪ್ಪಿದವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ:ಕೇರಳ ಸ್ಫೋಟ ಪ್ರಕರಣದಲ್ಲಿ ಮೃತರ ಸಂಖ್ಯೆ 4ಕ್ಕೇರಿಕೆ; 'ಯೂಟ್ಯೂಬ್ ನೋಡಿ ಐಇಡಿ ಸ್ಫೋಟಕ ತಯಾರಿ ಕಲಿತೆ'- ಆರೋಪಿ