ಕರ್ನಾಟಕ

karnataka

ಬಂಧಿತ ಆರೋಪಿತರು

ETV Bharat / videos

ಆಟೋಗೆ ದಾರಿ ಕೊಡಲಿಲ್ಲ ಎಂದು KSRTC ಬಸ್​ ಚಾಲಕನ ಮೇಲೆ ಹಲ್ಲೆ: ಮೂವರ ಬಂಧನ - ಈಟಿವಿ ಭಾರತ ಕನ್ನಡ

By

Published : Aug 2, 2023, 12:38 PM IST

ದೇವನಹಳ್ಳಿ: ಆಟೋಗೆ ದಾರಿ ಕೊಡಲಿಲ್ಲ ಎಂದು ಕೆಎಸ್​ಆರ್​ಟಿಸಿ ಬಸ್​ ಚಾಲಕನ ಮೇಲೆ ಆಟೋ ಚಾಲಕ ಮತ್ತು ಸಂಗಡಿಗರು ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ಮಾಡೇಶ್ವರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮಾಡೇಶ್ವರ ಗ್ರಾಮದಿಂದ ದೊಡ್ಡಬೆಳವಂಗಲಕ್ಕೆ ಬಸ್​ ಹೋಗುತ್ತಿತ್ತು. ಈ ವೇಳೆ, ಬಸ್​ ಹಿಂದೆ ಆಟೋವೊಂದು ಬಂದಿದ್ದು, ಆಟೋಗೆ ದಾರಿ ಕೊಡಲಿಲ್ಲ ಎಂದು ನಡು ರಸ್ತೆಯಲ್ಲಿ ಬಸ್ ನಿಲ್ಲಿಸಿ ಆಟೋ ಚಾಲಕ ಮತ್ತು ಆತನ ಸ್ನೇಹಿತರು ಕರ್ತವ್ಯ ನಿರತ ಕೆಎಸ್​ಆರ್​ಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಶ್ಯ ಪ್ರಯಾಣಿಕರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ನಿನ್ನೆ ಮಧ್ಯಾಹ್ನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ‌ ಬಂದಿದೆ. 

ಹಲ್ಲೆಯಿಂದ ಚಾಲಕನನ್ನ ರಕ್ಷಿಸಲು ಹೋದ ನಿರ್ವಾಹಕ ಮತ್ತು ಪ್ರಯಾಣಿಕರ ಮೇಲೂ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಗಾಯಗೊಂಡ ಬಸ್​ ಚಾಲಕ ಪ್ರಸನ್ನ ಅವರನ್ನು ಸ್ಥಳೀಯ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

ಚಾಲಕನ ಮೇಲೆ ಹಲ್ಲೆ ನಡೆಸಿದ ಗೋವಿಂದರಾಜು, ಹನುಮಂತರಾಜು, ನರಸಿಂಹರಾಜು ಎಂಬುವವರನ್ನು ದೊಡ್ಡಬೆಳವಂಗಲ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ಮಾಡಿದ ಕಾರು ಮಾಲೀಕರ ಕುಟುಂಬ: ವಿಡಿಯೋ ವೈರಲ್

ABOUT THE AUTHOR

...view details