ಅಂಗಾಂಗ ದಾನ ಪ್ರಕ್ರಿಯೆ.. ಈಟಿವಿ ಭಾರತನೊಂದಿಗೆ ಮಾಹಿತಿ ಹಂಚಿಕೊಂಡ ಮೈಸೂರಿನ ವೈದ್ಯ
ಮೈಸೂರು:ಅಂಗಾಂಗ ದಾನ ಎಂದರೇನು, ಇದರ ಪ್ರಕ್ರಿಯೆ ಹೇಗೆ ನಡೆಯುತ್ತದೆ, ಯಾವ್ಯಾವ ಅಂಗಗಳನ್ನು ದಾನ ಮಾಡಬಹುದು, ಕಾನೂನು ಪ್ರಕ್ರಿಯೆ ಹೇಗಿದೆ, ಭಾರತದಲ್ಲಿ ಅಂಗಾಂಗ ದಾನದ ಹಿಂಜರಿಕೆಗೆ ಕಾರಣವೇನು ಎಂಬ ಪ್ರಶ್ನೆಗಳಿಗೆ ವೈದ್ಯರು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಅಂಗಾಂಗ ದಾನದ ದಿನಾಚರಣೆಯ ಹಿನ್ನೆಲೆಯಲ್ಲಿ, ಡಾಕ್ಟರ್ ರಾಜಕುಮಾರ್ ಪಿ. ವಾದ್ಯಾ ಅವರು 'ಈಟಿವಿ ಭಾರತ'ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ.
ಅಂಗಾಂಗ ದಾನದ ಮಹತ್ವವನ್ನು ತಿಳಿಸಲು ಇಂದು (ಆಗಸ್ಟ್ 3) ರಾಷ್ಟ್ರೀಯ ಅಂಗಾಂಗ ದಾನ ದಿನವನ್ನು ಆಚರಿಸಲಾಗುತ್ತಿದೆ. ಅಪೋಲೊ ಆಸ್ಪತ್ರೆಯ ತಜ್ಞ ವೈದ್ಯ ರಾಜಕುಮಾರ್ ಪಿ. ವಾದ್ಯಾ ಅವರು, ''ಅಂಗಾಂಗ ದಾನ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತದೆ. ಆದರೆ, ಭಾರತದಲ್ಲಿ ಧರ್ಮ ಹಾಗೂ ಇತರ ವಿಚಾರಗಳಿಂದ ಅಂಗಾಂಗ ದಾನ ಪ್ರಕ್ರಿಯೆ ಅಷ್ಟೊಂದು ಸ್ಪಂದನೆ ಲಭಿಸಿಲ್ಲ. ಆದರೆ, ವ್ಯಕ್ತಿ ಮೃತಪಟ್ಟ ನಂತರವೂ ಮತ್ತೊಬ್ಬರಿಗೆ ಬದುಕನ್ನು ನೀಡುವ ಅಂಗಾಂಗ ದಾನ ಪ್ರಕ್ರಿಯೆ ಮತ್ತಷ್ಟು ಮಹತ್ವ ಪಡೆಯಬೇಕಾದ ಅವಶ್ಯಕತೆ ಇದೆ. ಸರ್ಕಾರ ಹಾಗೂ ಸಂಘ, ಸಂಸ್ಥೆಗಳಿಂದ ಜನರಲ್ಲಿ ಇನ್ನೂ ಹೆಚ್ಚಿನ ಮಟ್ಟದ ಅಂಗಾಂಗ ದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದು ಅವರು ಸಂದರ್ಶನದಲ್ಲಿ ವಿವರಿಸಿದರು.
ಇದನ್ನೂ ಓದಿ:Migraine: ದೀರ್ಘಕಾಲದ ಮೈಗ್ರೇನ್ಗೆ ಅಟೊಜೆಪೆಂಟ್ ಔಷಧ ಸುರಕ್ಷಿತ ಮತ್ತು ಪರಿಣಾಮಕಾರಿ; ಅಧ್ಯಯನ