ಗೋಕಾಕ್ ತಹಶಿಲ್ದಾರ್ ಮನೆಗೆ ಕನ್ನ.. ಚಿನ್ನಾಭರಣ, ಹಣ ಕದ್ದು ಖದೀಮರು ಪರಾರಿ - ಗೋಕಾಕ್ ನಗರ ಠಾಣೆ ಪೊಲೀಸರು ಭೇಟಿ
ಬೆಳಗಾವಿ: ಗೋಕಾಕ್ನ ತಹಶಿಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಖದೀಮರು ಕೈಚಳಕ ತೋರಿಸಿದ್ಧಾರೆ. ಮನೆಯಲ್ಲಿ ರಾತ್ರಿ ಯಾರೂ ಇಲ್ಲದ ವೇಳೆಯಲ್ಲಿ ಸಮಯ ಸಾಧಿಸಿ ಮನೆಗೆ ಕನ್ನ ಹಾಕಿದ್ದಾರೆ. ಮನೆಯಲ್ಲಿದ್ದ 25 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿ, 4 ಸಾವಿರ ನಗದು ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ಗೋಕಾಕ್ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Last Updated : Feb 3, 2023, 8:35 PM IST