ದೇವಸ್ಥಾನದ ಕಾಣಿಕೆ ಪೆಟ್ಟಿಗೆಯನ್ನು ಹೊತ್ತೊಯ್ದ ಕಳ್ಳರು
ದೇವಸ್ಥಾನದ ಕಾಣಿಕೆ ಪೆಟ್ಟಿಗೆ ಹೊತ್ತೊಯ್ದ ಕಳ್ಳರು: ಸಿಸಿಟಿವಿ ದೃಶ್ಯ - ಈಟಿವಿ ಭಾರತ್ ಕನ್ನಡ ಸುದ್ದಿ
ಚಿಕ್ಕೋಡಿ: ಬೀರೇಶ್ವರ ದೇವಸ್ಥಾನದಲ್ಲಿ ಕಳ್ಳರು ಕಾಣಿಕೆ ಪೆಟ್ಟಿಗೆಯನ್ನೇ ಹೊತ್ತೊಯ್ದಿದ್ದಾರೆ. ಚಿಕ್ಕೋಡಿ ತಾಲೂಕಿನ ವಡಗೋಲ ಗ್ರಾಮದ ದೇಗುಲದಲ್ಲಿ ಬುಧವಾರ ತಡರಾತ್ರಿ ಘಟನೆ ನಡೆದಿದೆ. ಬೆಳಗ್ಗೆ ಅರ್ಚಕರು ಬಂದಾಗ ವಿಷಯ ಗೊತ್ತಾಗಿದೆ. ಮೂವರು ಕೃತ್ಯ ಎಸಗಿದ್ದಾರೆ. ಸದಲಗಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.