ಸ್ಕೂಟಿಯಲ್ಲಿ ಇಟ್ಟಿದ್ದ 45 ಸಾವಿರ ನಗದು ಕದ್ದು ಖದೀಮರು ಪರಾರಿ, ಸಿಸಿಟಿವಿಯಲ್ಲಿ ಸೆರೆ - ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ ಪೊಲೀಸರು
ಬೆಂಗಳೂರು: ಬ್ಯಾಂಕ್ ಎದುರು ವಾಹನ ನಿಲ್ಲಿಸಿ ವ್ಯಕ್ತಿಯೊಬ್ಬರು ಒಳಗೆ ಹೋಗಿ ಬರುವಷ್ಟರಲ್ಲಿ ಸ್ಕೂಟಿ ಡಿಕ್ಕಿಯಲ್ಲಿ ಇಟ್ಟಿದ್ದ 45 ಸಾವಿರ ರೂಪಾಯಿ ಕದ್ದು ಖದೀಮರು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿರುವ ಘಟನೆ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಸವೇಶ್ವರ ಯೂನಿಯನ್ ಬ್ಯಾಂಕ್ ಎದುರು ನಡೆದಿದೆ.
ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಸವೇಶ್ವರ ಯೂನಿಯನ್ ಬ್ಯಾಂಕ್ಗೆ ವ್ಯಕ್ತಿಯೊಬ್ಬರು ಹಣದ ಸಮೇತ ಸ್ಕೂಟಿಯಲ್ಲಿ ಬಂದಿದ್ದರು. ಈ ಸಂದರ್ಭದಲ್ಲಿ ಸ್ಕೂಟಿ ವಾಹನ ಡಿಕ್ಕಿಯಲ್ಲಿ ವ್ಯಕ್ತಿಯೂ ಹಣ ಬಿಟ್ಟು ಬ್ಯಾಂಕಿನ ಒಳಗೆ ಹೋಗಿದ್ದರು.
ಸ್ಕೂಟಿ ಡಿಕ್ಕಿಯಲ್ಲಿ ಹಣವಿರುವುದನ್ನು ಗಮನಿಸಿದ್ದ ಖದೀಮರು, ವ್ಯಕ್ತಿಯ ಚಲನವಲನ ಗಮನಿಸಿದ್ದಾರೆ. ವ್ಯಕ್ತಿಯೂ ಬ್ಯಾಂಕ್ ಒಳಗೆ ಹೋಗುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಇಬ್ಬರು ಖದೀಮರು ದ್ವಿ ಚಕ್ರ ಸ್ಕೂಟಿ ಡಿಕ್ಕಿಯನ್ನು ಕೈಯಿಂದ ಓಪನ್ ಮಾಡಿ 45 ಸಾವಿರ ರೂಪಾಯಿ ಕದ್ದು ಎಸ್ಕೇಪ್ ಆಗಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕಾಗಮಿಸಿ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಇದನ್ನೂ ಓದಿ:ಕಾರುಗಳ ಕಳ್ಳತನ: 100ಕ್ಕೂ ಹೆಚ್ಚು ಕಾರುಗಳನ್ನು ಕದ್ದ ಇಬ್ಬರನ್ನು ಬಂಧಿಸಿದ ಕ್ರೈಂ ಬ್ರಾಂಚ್