ಕರ್ನಾಟಕ

karnataka

ಕೆನರಾ ಬ್ಯಾಂಕ್​ನಲ್ಲಿ ಕಳ್ಳತನ

ETV Bharat / videos

ಚಾಮರಾಜನಗರ: ಬ್ಯಾಂಕ್ ಸಿಬ್ಬಂದಿಯಂತೆ ಬಂದು ಕ್ಯಾಶ್‌ ಕೌಂಟರ್‌ನಿಂದ ₹5 ಲಕ್ಷ ದೋಚಿದ ಕಳ್ಳ; ಕೃತ್ಯ ಸಿಸಿಟಿವಿಯಲ್ಲಿ ಸೆರೆ - ​ ETV Bharat Karnataka

By ETV Bharat Karnataka Team

Published : Oct 18, 2023, 5:02 PM IST

ಚಾಮರಾಜನಗರ : ಬ್ಯಾಂಕ್​ಗೆ ಸಿಬ್ಬಂದಿಯಂತೆ ಆಗಮಿಸಿದ ಕಳ್ಳ ರಾಜಾರೋಷವಾಗಿಯೇ 5 ಲಕ್ಷ ರೂಪಾಯಿ ಕದ್ದೊಯ್ದ ಘಟನೆ ಬುಧವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಚಾಮರಾಜನಗರದ ಜೋಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್​ ಶಾಖೆಯಲ್ಲಿ ನಡೆದಿದೆ. ಚಾಲಾಕಿ ಕಳ್ಳ ಟಿಪ್‌ಟಾಪ್ ದಿರಿಸಿನಲ್ಲಿದ್ದು, ಸ್ಟೈಲಿಷ್ ಆಗಿ ಬ್ಯಾಂಕ್ ಕ್ಯಾಷ್ ಕೌಂಟರ್​ನತ್ತ ಬಂದು ಯಾವುದೇ ಅಳುಕು, ಆತಂಕವಿಲ್ಲದೆ ಹಣ ಎಗರಿಸಿದ್ದಾನೆ.

ಬ್ಯಾಂಕ್ ಸಿಬ್ಬಂದಿ ರೀತಿ ವರ್ತಿಸಿದ್ದರಿಂದ ಸಿಬ್ಬಂದಿಗೆ ಯಾವುದೇ ಅನುಮಾನ ಬಂದಿರಲಿಲ್ಲ. ಜನರ ನಡುವೆಯೇ ಕರಾಮತ್ತು ತೋರಿಸಿದ್ದಾನೆ. ಕಳ್ಳನ ಮೋಸದಾಟಕ್ಕೆ ಬ್ಯಾಂಕ್ ಸಿಬ್ಬಂದಿಯೇ ಕಕ್ಕಾಬಿಕ್ಕಿಯಾಗಿದ್ದಾರೆ. ಐದು ಲಕ್ಷ ರೂಪಾಯಿ ಹಣದ ಬಂಡಲ್ ಹಿಡಿದು ಆರಾಮಾವಾಗಿ ಹೊರಬಂದಿರುವ ಭೂಪನಿಗೆ ಇತರ ಮೂವರು ವ್ಯಕ್ತಿಗಳು ಸಹಕಾರ ನೀಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಸದ್ಯ, ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಸಡೆಸಿದ್ದಾರೆ. ಬ್ಯಾಂಕ್ ಕಳವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.  

ಇದನ್ನೂ ಓದಿ :ಮಂಡ್ಯ: ಬ್ಯಾಂಕ್ ದರೋಡೆಗೆ ಬಂದು ಸೆಕ್ಯೂರಿಟಿ ಗಾರ್ಡ್​ಗೆ ಚಾಕು ಇರಿದು ಪರಾರಿ

ABOUT THE AUTHOR

...view details