ಕೆಲ್ಸ ಮಾಡ್ಬೇಕು ಅಂದ್ರೆ ಮತ ಹಾಕ್ಬೇಕು ಅಂತ ಹೇಳೋದ್ರಲ್ಲಿ ತಪ್ಪೇನಿದೆ?: ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ - ಬಿಜೆಪಿ ಜೆಡಿಎಸ್ ಮೈತ್ರಿ
Published : Oct 12, 2023, 10:30 PM IST
ರಾಮನಗರ : ಜನತೆ ನಮಗೆ ಮತ ಹಾಕೋದು ನಾವು ಕೆಲಸ ಮಾಡಲಿ ಅಂತ. ಕೆಲಸ ಮಾಡಬೇಕು ಅಂದ್ರೆ ಮತ ಹಾಕಬೇಕು ಅಂತಾ ಹೇಳುವುದರಲ್ಲಿ ತಪ್ಪೇನಿದೆ? ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ರಾಮನಗರದಲ್ಲಿ ಇಂದು ಮಾತನಾಡಿದ ಅವರು, ನಾನು ಎಂದಿಗೂ ಕೂಡ ಕೆಲಸ ಮಾಡಲ್ಲ ಅಂತ ಹೇಳಿದ್ದೀನಾ?. ನಾನು ಮತ ಹಾಕದೇ ಇರೋರಿಗೆ ಕೆಲಸ ಮಾಡಲ್ಲ ಅಂತ ಹೇಳಿಲ್ಲ. ಆಲೋಚನೆ ಮಾಡ್ತೇನೆ ಅಂತ ಹೇಳಿದ್ದೀನಿ. ಹೆಚ್ಚು ಲೀಡ್ ಕೊಡೋ ಬೂತ್‍ಗೆ ಹೆಚ್ಚು ಆಸಕ್ತಿ ವಹಿಸುತ್ತೇವೆ. ಕಡಿಮೆ ಲೀಡ್ ಕೊಡೋ ಬೂತ್‍ಗೆ ಕಡಿಮೆ ಆಸಕ್ತಿ ವಹಿಸುತ್ತೇವೆ. ಇದರಲ್ಲಿ ದ್ವೇಷ ರಾಜಕಾರಣ ಏನಿದೆ?, ನಾನೇನು ಜಗಳ ಮಾಡೋಕೆ ಹೋಗಿದ್ದೀನಾ? ಎಂದರು.
ಇನ್ನು, ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‍ಗೆ ಅನುಕೂಲವಾಗಲಿದೆ. ಕಾಂಗ್ರೆಸ್ ಮತಗಳು ವಿಭಜನೆ ಆಗಲ್ಲ. ಮುಂದಿನ ಐದು ವರ್ಷ ನಮ್ಮ ಸರ್ಕಾರ ಇರುತ್ತದೆ. ಬೂತ್ ಲೆಕ್ಕಾಚಾರದ ಮೇಲೆ ಎಲೆಕ್ಷನ್ ಆಗಲಿದೆ. ಯಾವ ಬೂತ್ನಲ್ಲಿ ಹೆಚ್ಚು ನಮಗೆ ವೋಟ್ ಬರುತ್ತೋ ಅಲ್ಲಿ ಕೆಲಸ ಮಾಡ್ತೀವಿ. ವೋಟ್ ಹಾಕದಿದ್ರೆ ಅಂತಹ ಬೂತ್ಗಳ ಬಗ್ಗೆ ಆಲೋಚನೆ ಮಾಡ್ತೀವಿ. ಹಾಗಾಗಿ ಇದನ್ನು ಜನ ಯೋಚನೆ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ:ರಾಮನಗರ: ಹಾಲಿ - ಮಾಜಿ ಶಾಸಕರ ಮಧ್ಯೆ ಜಟಾಪಟಿ