ಆಟೋದಲ್ಲಿದ್ದ ನಗದು ಮತ್ತು ಪೆನ್ಡ್ರೈವ್ ಕಳ್ಳತನ; ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ - ಈಟಿವಿ ಭಾರತ ಕನ್ನಡ
ಹುಬ್ಬಳ್ಳಿ:ಖದೀಮನೊಬ್ಬ ಹಾಡಹಗಲೇ ಆಟೋದಲ್ಲಿದ್ದ ನಗದು ಮತ್ತು ಪೆನ್ಡ್ರೈವ್ ಕದ್ದು ಪರಾರಿಯಾಗಿರುವ ಘಟನೆ ನಗರದ ಗಬ್ಬೂರ ರಸ್ತೆಯಲ್ಲಿರುವ ಅಂಜುಮನ್ ಶಾದಿ ಹಾಲ್ ಹತ್ತಿರ ನಡೆದಿದೆ. ಕಳ್ಳತನದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಹಮ್ಮದ್ ಗೌಸ್ ಗೌಳಿ ಎಂಬವರಿಗೆ ಸೇರಿದ ಆಟೋ ಇದಾಗಿದ್ದು, ಆಟೋ ಚಾಲಕ ಟೀ ಕುಡಿಯಲು ತೆರಳಿದ್ದ ವೇಳೆ ಆಟೋದಲ್ಲಿದ್ದ 6,300 ರೂ. ಹಣ ಮತ್ತು ಒಂದು ಪೆನ್ ಡ್ರೈವ್ ಕದ್ದು ಕಳ್ಳ ಪರಾರಿಯಾಗಿದ್ದಾನೆ. ಈ ಕುರಿತಂತೆ ಆಟೋ ಚಾಲಕ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಇಂಥಾ ಹುಚ್ಚರು ಇರ್ತಾರೆ.. 'ವೈಫ್ ಗಿವಿಂಗ್' ದಂಧೆ ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸರು..