ಕರ್ನಾಟಕ

karnataka

ETV Bharat / videos

ಬೆಳಗಾವಿಯಲ್ಲಿ ಏಕಕಾಲಕ್ಕೆ 5 ಅಂಗಡಿಗಳಲ್ಲಿ ಕಳ್ಳತನ: ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ - etv bharat karnataka

🎬 Watch Now: Feature Video

ಬೆಳಗಾವಿಯಲ್ಲಿ ಏಕಕಾಲಕ್ಕೆ 5 ಅಂಗಡಿಗಳಲ್ಲಿ ಕಳ್ಳತನ: ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

By ETV Bharat Karnataka Team

Published : Oct 28, 2023, 2:04 PM IST

ಬೆಳಗಾವಿ: ನಗರದಲ್ಲಿ ಬೆಳ್ಳಂಬೆಳಗ್ಗೆ ಖದೀಮರು ತಮ್ಮ ಕೈ ಚಳಕ ತೋರಿಸಿದ್ದು, ಐದು ಅಂಗಡಿಗಳಿಗೆ ಕನ್ನ ಹಾಕಿರುವ ಘಟನೆ ನಡೆದಿದೆ. ನಗರದ ಪಾಂಗುಳ ಗಲ್ಲಿಯ ನ್ಯೂ ಲೈಫ್ ಮೆಡಿಕಲ್ಸ್, ಸಂಸ್ಕಾರ ಸಾರೀಸ್ ಹಾಗೂ ಸಿದ್ದೇಶ್ವರ ಟ್ರೇಡರ್ಸ್ ಹಾಗೂ ಅಶೋಕ ಕ್ಲಾಥ್ ಸ್ಟೋರ್ಸ್ ಸೇರಿ ಎರಡು ಅಂಗಡಿಗಳಲ್ಲಿ ಕಳ್ಳತನ ಮಾಡಲಾಗಿದೆ. ಮೂವರು ಕಳ್ಳರು ಅಂಗಡಿ ಮತ್ತು ಮೆಡಿಕಲ್ ಶಾಪ್ ಬಾಗಿಲಿಗೆ ಹಾಕಿದ್ದ ಕೀ ಒಡೆದು, ಒಳಗೆ ನುಗ್ಗಿ ಅಪಾರ ಪ್ರಮಾಣದ ಹಣ ದೋಚಿಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಬೆಳಗ್ಗೆ ಮಾಲೀಕರು ಅಂಗಡಿಗೆ ಬಂದಾಗ ಕಳ್ಳತನ ಆಗಿರುವ ವಿಷಯ ಗೊತ್ತಾಗಿದೆ. ಸ್ಥಳಕ್ಕೆ ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ಎಷ್ಟು ಹಣ ಕಳ್ಳತನ ಆಗಿದೆ ಎಂಬ ಕುರಿತು ನಿಖರ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ. ಕಳ್ಳತನ ಆಗಿದ್ದರಿಂದ ಇಲ್ಲಿನ ವ್ಯಾಪಾರಿಗಳು ಆತಂಕಿತರಾಗಿದ್ದಾರೆ. ಪದೇ ಪದೆ ಅಂಗಡಿ ಹಾಗೂ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಕೋರ್ಟ್ ಆವರಣದಲ್ಲಿರುವ ಅಂಚೆ ಕಚೇರಿಯಲ್ಲೇ ಕೈಚಳಕ ತೋರಿಸಿದ ಕಳ್ಳರು.. ನಗದು ದೋಚಿ ಪರಾರಿ: ಪ್ರಕರಣ ದಾಖಲು

ABOUT THE AUTHOR

...view details