ಕರ್ನಾಟಕ

karnataka

247 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದ ಅಮೆರಿಕಾ

ETV Bharat / videos

Independence Day: 247 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದ ಅಮೆರಿಕ.. ಗಮನ ಸೆಳೆದ 60,000 ಸಿಡಿಮದ್ದು ಪ್ರದರ್ಶನ - ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್‌

By

Published : Jul 5, 2023, 3:17 PM IST

Updated : Jul 5, 2023, 3:39 PM IST

ವಾಷಿಂಗ್ಟನ್ ಡಿಸಿ (ಅಮೆರಿಕ): ವಿಶ್ವದ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೆರಿಕ 247 ನೇ ಸ್ವಾತಂತ್ರ್ಯ ದಿನವನ್ನು ನಿನ್ನೆ ರಾತ್ರಿ (ಜುಲೈ 4) ಆಚರಿಸಿತು. ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್‌ನಲ್ಲಿ ಸಂಭ್ರಮಾಚರಣೆಯನ್ನು ಕಣ್ತುಂಬಿಕೊಂಡರು. ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವ ವಿಡಿಯೋವನ್ನು  ಹಂಚಿಕೊಂಡ ಅಧ್ಯಕ್ಷ ಬೈಡನ್ ಅಮೆರಿಕ ಜನತೆಗೆ ಸ್ವಾತಂತ್ರ್ಯದ ದಿನಾಚರಣೆ  ಶುಭಕೋರಿದರು.

ಶ್ವೇತಭವನದಲ್ಲಿ ಅಮೆರಿಕ ಮಿಲಿಟರಿಯ ಪ್ರೀಮಿಯರ್ ಬ್ಯಾಂಡ್‌ಗಳು, ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ಬ್ರದರ್ಸ್ ಓಸ್ಬೋರ್ನ್ ಮತ್ತು ಮೂರು ಬಾರಿ ಗ್ರ್ಯಾಮಿ ಗೆದ್ದ ನಿ-ಯೋ ಅವರಿಂದ ಸಂಗೀತ ಕಾರ್ಯಕ್ರಮ ನಡೆಸಲಾಯಿತು.   ಸ್ವಾತಂತ್ರ್ಯ ದಿನವನ್ನು ಆಚರಿಸಲು ಮಂಗಳವಾರ ರಾತ್ರಿಯ ಆಕಾಶದಲ್ಲಿ 60,000 ಪಟಾಕಿಗಳನ್ನು ಸಿಡಿಸಿಸಲಾಯಿತು. 25 ನಿಮಿಷಗಳ ಕಾಲದ ಸಿಡಿಮದ್ದಿನ ಪ್ರದರ್ಶನ ನಡೆಯಿತು. ಇದನ್ನು ನೋಡಲು ಜನ ಸಮುದಾಯವೇ ಅಲ್ಲಿ ನೆರೆದಿತ್ತು. 

1776 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರದ ಕ್ರಾಂತಿಕಾರಿಗಳ ತ್ಯಾಗವನ್ನು ಸ್ಮರಿಸಿದ್ದಾರೆ. ಹಾಗೇ ರಾಷ್ಟ್ರವನ್ನು ರಕ್ಷಿಸುವಲ್ಲಿ ಯುನೈಟೆಡ್ ಸ್ಟೇಟ್ಸ್ ಸೈನಿಕರು ಮತ್ತು ಮಿಲಿಟರಿಯನ್ನು ಗೌರವಿಸಲಾಯಿತು. 

ಇದನ್ನೂ ಓದಿ:SCO Summit: ಭಯೋತ್ಪಾದನೆ, ಮೂಲಭೂತವಾದ ಮೆಟ್ಟಿನಿಲ್ಲುವುದು ಎಸ್‌ಸಿಒಯ ಆದ್ಯತೆ: ವ್ಲಾಡಿಮಿರ್ ಪುಟಿನ್

Last Updated : Jul 5, 2023, 3:39 PM IST

ABOUT THE AUTHOR

...view details