ಕರ್ನಾಟಕ

karnataka

ಮಲೆನಾಡು ಭಾಗದಲ್ಲಿ ಮಳೆ

ETV Bharat / videos

ಮಲೆನಾಡು ಭಾಗದಲ್ಲಿ ಮಳೆ, ತುಂಗಭದ್ರಾ ನದಿಗೆ ಬಂತು ಜೀವಕಳೆ...! - ಶಿವಮೊಗ್ಗ ಜಿಲ್ಲೆಯ ತುಂಗಾ ನದಿ ಭರ್ತಿ

By

Published : Jul 22, 2023, 9:39 PM IST

ದಾವಣಗೆರೆ:ಮಲೆನಾಡು ಭಾಗದಲ್ಲಿ ಹೆಚ್ಚು ಮಳೆ ಆಗುತ್ತಿರುವ ಕಾರಣ ಜಿಲ್ಲೆಯ ಹರಿಹರದ ಮಾರ್ಗವಾಗಿ ಹರಿದು ಹೋಗುವ ತುಂಗಭದ್ರಾ ನದಿಗೆ ಜಲರಾಶಿ ಹರಿದು ಬರುತ್ತಿದೆ. ಪರಿಣಾಮ ಹನಿ ನೀರಿಲ್ಲದೆ ಬಣಗುಡುತ್ತಿದ್ದ ನದಿಗೆ ಜೀವಕಳೆ ಬಂದಂತಾಗಿದೆ.‌ ಈಗಾಗಲೇ ಶಿವಮೊಗ್ಗ ಜಿಲ್ಲೆಯ ತುಂಗಾ ನದಿ ಭರ್ತಿಯಾಗಿದೆ. 

ಇನ್ನು, ಭದ್ರಾ ಜಲಾಶಯ ಭರ್ತಿಯಾಗಬೇಕಿದ್ದು, ಜಲಾಶಯ ಭರ್ತಿಯಾಗಿ ನೀರು ನದಿಗೆ ಹರಿಸಿದ್ರೇ ತುಂಗಭದ್ರಾ ನದಿ ತಟದಲ್ಲಿರುವವರಿಗೆ ತೊಂದರೆ ಆಗಲಿದೆ. ತುಂಗಾ ಭದ್ರಾ ನದಿಯ ನೀರಿನ ಮಟ್ಟ ಹೆಚ್ಚಳವಾಗಿದ್ದರಿಂದ ಈ ಭಾಗದ ಜನರ ಮೊಗದಲ್ಲಿ ಮಂದಹಾಸ ಮನೆ ಮಾಡಿದೆ. 

ದಾವಣಗೆರೆಯ ಹರಿಹರದ ಬಳಿ ಹರಿಯುತ್ತಿರುವ ತುಂಗಾಭದ್ರ ನದಿ ಕಳೆದ ವಾರ ಖಾಲಿ ಖಾಲಿಯಾಗಿ ಗೋಚರಿಸುತ್ತಿತ್ತು. ಇದೀಗ ಈ ನದಿ ಮೈತುಂಬಿ ಹರಿಯುತ್ತಿರುವ ಮನಮೋಹಕ ದೃಶ್ಯ ನೋಡಲು ಜನ ಆಗಮಿಸುತ್ತಿದ್ದಾರೆ.‌

ಒಂದು ವೇಳೆ ಭದ್ರಾ ನದಿಯ ನೀರು ಹೊರ ಬಿಟ್ಟರೆ, ಹೊನ್ನಾಳಿ, ಹರಿಹರ ಭಾಗದಲ್ಲಿ ನೀರಿನ ಮಟ್ಟ ಹೆಚ್ಚಾಗಲಿದೆ. ಇದರಿಂದ ಮುಂಜಾಗ್ರತೆ ವಹಿಸಿರುವ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ನದಿ ಬಳಿ ತೆರಳದಂತೆ ನದಿ ಪಾತ್ರದ ಜನರಿಗೆ ಸೂಚನೆ ನೀಡಿದೆ.‌ ಸದ್ಯ 4500 ಕ್ಯೂಸೆಕ್​​ ನೀರು ನದಿಯಲ್ಲಿ ಹರಿಯುತ್ತಿದ್ದು, ವಿಜಯನಗರ ಹಾಗೂ ದಾವಣಗೆರೆ ಭಾಗದ ರೈತರಿಗೆ ಉಪಯೋಗ ಆಗಲಿದೆ.

ಓದಿ:ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ಮಂತ್ರಾಲಯದ ಸ್ನಾನಘಟ್ಟಗಳು ಜಾಲಾವೃತ

ABOUT THE AUTHOR

...view details