ನಿಯಂತ್ರಣ ತಪ್ಪಿ ಕಾಲುವೆಗೆ ನುಗ್ಗಿದ ಟ್ರ್ಯಾಕ್ಟರ್.. ನೀರಿನಲ್ಲಿ ಉಸಿರುಗಟ್ಟಿ ಚಾಲಕ ಸಾವು - ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಮೃತ
ಹಾವೇರಿ: ಟ್ರ್ಯಾಕ್ಟರ್ವೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಲುವೆಗೆ ನುಗ್ಗಿದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದ ಬಳಿ ಸಂಭವಿಸಿದೆ. ಮೃತನನ್ನು ಶರಣಪ್ಪ ಅಂತಾ ಗುರುತಿಸಲಾಗಿದೆ. ಶರಣಪ್ಪ ಮೆಕ್ಕೆಜೋಳದ ತೆನೆಗಳನ್ನು ತುಂಬಿಕೊಂಡು ಬರಲು ಜಮೀನಿಗೆ ಹೊರಟಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಲುವೆ ನೀರಿಗೆ ಟ್ರ್ಯಾಕ್ಟರ್ ಸಮೇತ ಬಿದ್ದಿದ್ದಾನೆ. ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿದ ಪರಿಣಾಮ ಮತ್ತು ಕಾಲುವೆ ನೀರಿನಲ್ಲಿ ಸಿಲುಕಿಕೊಂಡಿದ್ದರಿಂದ ಶರಣಪ್ಪ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಸ್ಥಳೀಯ ರೈತರು ಶರಣಪ್ಪನ ಮೃತದೇಹವನ್ನು ಹೊರ ತೆಗೆದಿದ್ದಾರೆ. ರಟ್ಟೀಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
Last Updated : Feb 3, 2023, 8:31 PM IST