ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು: ಬಿದ್ದು ಹೊರಳಾಡಿ ನ್ಯಾಯಕ್ಕೆ ಮೊರೆಯಿಟ್ಟ ರೈತ - ರೈತ ಅಡಿವೆಪ್ಪಾ ಆಲದಕಟ್ಟಿ ಕಣ್ಣೀರು
ಹಾವೇರಿ: ಬೆಳೆದು ನಿಂತಿದ್ದ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಮನಬಂದಂತೆ ಕತ್ತಿಯಿಂದ ಕಡಿದು ಹಾಕಿರುವ ಅಮಾನವೀಯ ಘಟನೆ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ. ಇದರಿಂದ ತೀವ್ರವಾಗಿ ಮನನೊಂದ ರೈತ ಅಡಿವೆಪ್ಪಾ ಆಲದಕಟ್ಟಿ ಎಂಬವರು ಜಮೀನಿನಲ್ಲಿ ಬಿದ್ದಿದ್ದ ಗಿಡಗಳನ್ನು ಹಿಡಿದು ಕಣ್ಣೀರು ಹಾಕುತ್ತಾ ಉರುಳಾಡಿದರು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ನ್ಯಾಯ ಕೊಡಿಸುವಂತೆ ಆಗ್ರಹಿಸಿದರು. ಈ ಕುರಿತು ಅವರು ಆಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Last Updated : Feb 3, 2023, 8:30 PM IST