ಕರ್ನಾಟಕ

karnataka

ಹೋಟೆಲ್​ನಲ್ಲಿ ಬಿಲ್ ಕೇಳಿದ ಸಪ್ಲೈಯರ್​​​ಗೆ ಹಿಗ್ಗಾಮುಗ್ಗಾ ಥಳಿತ..

ETV Bharat / videos

ಹೋಟೆಲ್​ನಲ್ಲಿ ಬಿಲ್ ಕೇಳಿದ ಸಪ್ಲೈಯರ್​​​ಗೆ ಹಿಗ್ಗಾಮುಗ್ಗಾ ಥಳಿತ.. - anekal police

By

Published : May 29, 2023, 4:24 PM IST

Updated : May 29, 2023, 5:04 PM IST

ಆನೇಕಲ್ (ಬೆಂಗಳೂರು):ಹೋಟೆಲ್​​​​​ನಲ್ಲಿಬಿಲ್ ಕೇಳಿದ ಸಪ್ಲೈಯರ್​​ಗೆ ಪುಂಡರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಆನೇಕಲ್‌ನ ಹೊಸೂರು ರಸ್ತೆಯ ಸಂಜಯ್ ಗಾರ್ಡನ್ ಹೋಟೆಲ್​​​​ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದೇ ತಿಂಗಳ 23 ರಂದು 8 ಮಂದಿ ಪುಂಡರ ಗ್ಯಾಂಗ್ ಹೋಟೆಲ್​​ಗೆ ಊಟ ಮಾಡಲು ತೆರಳಿದ್ದರು. ಈ ವೇಳೆ, ಊಟವಾದ ಬಳಿಕ ಬಿಲ್ ಕೇಳಿದ್ದಕ್ಕೆ ಕಿರಾತಕರು ಸಪ್ಲೈಯರ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಸುಮಾರು 8 ಮಂದಿಯಿಂದ ಸಪ್ಲೈಯರ್ ಸುನೀಲ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗಾಯಾಳು ಸುನೀಲ್​​ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಕೊಡಿಸಲಾಗಿದೆ. ಘಟನೆ ಸಂಬಂಧ ನಾಲ್ವರನ್ನ ಬಂಧನ ಮಾಡಿರುವ ಆನೇಕಲ್ ಪೊಲೀಸರು ಈಗಾಗಲೇ ಸ್ಟೆಷನ್ ಬೇಲ್​​​ ನೀಡಿದ್ದಾರೆ. ಇನ್ನೂ ಆನೇಕಲ್ ಪಟ್ಟಣದಲ್ಲಿ ಮಿತಿ ಮೀರಿದ ಪುಂಡರ ಹಾವಳಿಯಿಂದ ಜನ ಬೇಸತ್ತಿದ್ದಾರೆ. ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಪೊಲೀಸರು ಕ್ರಮ ಕೈಗೆತ್ತಿಕೊಳ್ಳುವುದಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ :ಹಾವೇರಿಯಲ್ಲಿ ಟ್ರಕ್​ಗಳ ಡಿಕ್ಕಿ: ಧಗಧಗನೆ ಹೊತ್ತಿ ಉರಿದ ವಾಹನಗಳು-ವಿಡಿಯೋ

Last Updated : May 29, 2023, 5:04 PM IST

ABOUT THE AUTHOR

...view details