ಕರ್ನಾಟಕ

karnataka

ಸಿಂಹಣಿ ಬಾಯಿಯಿಂದ ಗೋಮಾತೆಯನ್ನು ರಕ್ಷಿಸಿದ ಅನ್ನದಾತ

ETV Bharat / videos

ಸಿಂಹಿಣಿ ಬಾಯಿಯಿಂದ ಗೋಮಾತೆ ರಕ್ಷಿಸಿದ ಅನ್ನದಾತ! ರೈತನ ಡೇರಿಂಗ್​ ವಿಡಿಯೋ ವೈರಲ್​.. - ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

By

Published : Jul 1, 2023, 9:07 AM IST

ಗಿರ್ ಸೋಮನಾಥ್(ಗುಜರಾತ್)​:ತಮ್ಮ ಸಾಕುಪ್ರಾಣಿಗಳ ಬಗ್ಗೆ ಮಾಲೀಕರಿಗೆ ಕಾಳಜಿ, ಪ್ರೀತಿ ಇರುವುದು ಸಾಮಾನ್ಯ. ಕೆಲವರು ಅವರನ್ನು ಕುಟುಂಬದ ಸದಸ್ಯರೆಂದು ಪರಿಗಣಿಸುತ್ತಾರೆ. ರೈತರ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಕೆಲವರು ಹಸು, ಎಮ್ಮೆಗಳನ್ನು ಸಾಕುವ ಮೂಲಕ ಜೀವನ ಸಾಗಿಸುತ್ತಾರೆ. ಅವರ ಜೀವನೋಪಾಯಕ್ಕೆ ಏನಾದರೂ ತೊಂದರೆಯಾದರೆ ತಕ್ಷಣವೇ ಸ್ಪಂದಿಸುತ್ತಾರೆ. ಇತ್ತೀಚೆಗಷ್ಟೇ ಹೆಣ್ಣು ಸಿಂಹ ದಾಳಿಯಿಂದ ರೈತನೊಬ್ಬ ತನ್ನ ಹಸುವನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ಅಲಿದರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಕೇಶೋದ್ ಕಾರ್ಪೊರೇಟ್ ಅಧಿಕಾರಿ ವಿವೇಕ್ ಕೊಟಾಡಿಯಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ, ರಸ್ತೆಯೊಂದರ ಮೇಲೆ ಸಿಂಹಿಣಿಯೊಂದು ಹಸುವಿನ ಕತ್ತನ್ನು ಹಿಡಿದು ಬೇಟೆಯಾಡುತ್ತಿದೆ. ಹಸು ನೋವಿನಿಂದ ನರಳುತ್ತಿದ್ದು, ಜೋರಾಗಿ ಕಿರುಚುತ್ತಿದೆ. ಹಸುವಿನ ಕಿರುಚಾಟ ಕೇಳಿದ ರೈತ ತಕ್ಷಣ ಅಲ್ಲಿಗೆ ಧಾವಿಸಿದ್ದಾರೆ.

ಹಸುವಿನ ಬಳಿ ಬಂದ ರೈತ ಸಿಂಹವನ್ನು ಹೆದರಿಸಿದ್ದಾರೆ. ರೈತ ರಸ್ತೆ ಬದಿಯಿಂದ ಕಲ್ಲು ತೆಗೆದುಕೊಂಡು ಸಿಂಹದ ಕಡೆಗೆ ಬಂದಿದ್ದಾರೆ. ಈ ವೇಳೆ ರೈತನ ನೋಡಿದ ಸಿಂಹ ತನ್ನ ಬೇಟೆಯನ್ನು ಅಲ್ಲೇ ಬಿಟ್ಟು ಕಾಡಿನೊಳಗೆ ಹೋಗಿದೆ. ಈ ಒಂದು ದೃಶ್ಯವನ್ನು ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ರೈತನ ಧೈರ್ಯವನ್ನು ಶ್ಲಾಘಿಸಿದ್ದಾರೆ. 

ಓದಿ:ಕಟ್ಟಿ ಹಾಕಿದ್ರೂ ಸಿಂಹದ ಮರಿಗಳೆದುರು ಸಾಮರ್ಥ್ಯ ಪ್ರದರ್ಶಿಸಿದ ಗೂಳಿ: ವಿಡಿಯೋ 

ABOUT THE AUTHOR

...view details