ಕರ್ನಾಟಕ

karnataka

ಬೆಂಕಿಗೆ ಆಹುತಿಯಾದ ಜೋಳ

ETV Bharat / videos

ಆಕಸ್ಮಿಕ ಬೆಂಕಿಯಿಂದ ಸುಟ್ಟು ಕರಕಲಾದ ಜೋಳದ ತೆನೆ ರಾಶಿ.. ಮನಕಲಕುವಂತಿದೆ ರೈತನ ಆಕ್ರಂದನ - ಈಟಿವಿ ಭಾರತ್ ಕನ್ನಡ ಸುದ್ದಿ

By

Published : Feb 5, 2023, 9:36 PM IST

Updated : Feb 6, 2023, 4:07 PM IST

ಬಳ್ಳಾರಿ: ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಜೋಳದ ತೆನೆ ರಾಶಿ ಬೆಂಕಿಗೆ ಆಹುತಿಯಾದ ಘಟನೆ ಬಳ್ಳಾರಿ ತಾಲೂಕಿನ ಜಾನೆಕುಂಟೆ ಗ್ರಾಮದಲ್ಲಿ ಸಂಭವಿಸಿದೆ. ಜಾನೆಕುಂಟೆ ಗ್ರಾಮದ ಶಾಂತಕುಮಾರ್ ಎಂಬ ರೈತರಿಗೆ ಸೇರಿದ ಜೋಳದ ತೆನೆ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಸುಮಾರು 25 ಎಕರೆಯಲ್ಲಿ ಬೆಳೆದಿದ್ದ ಜೋಳದ ತೆನೆಯನ್ನು ರಾಶಿ ಮಾಡಿ ಗ್ರಾಮದ ಹೊರವಲಯದ ಕಣದಲ್ಲಿ ಸಂಗ್ರಹಿಸಿಟ್ಟಿದ್ದರು.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಪಾರ ಪ್ರಮಾಣದ ಜೋಳದ ರಾಶಿ ಬೆಂಕಿಗಾಹುತಿ ಆಗಿರುವುದಕ್ಕೆ ರೈತ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ತಪ್ಪಾದ ಔಷಧಿ ಸಿಂಪಡಣೆ: ಕಣ್ಣೆದುರೇ ಕಮರಿದ 4 ಎಕರೆ ದ್ರಾಕ್ಷಿ ಬೆಳೆ, ಆತ್ಮಹತ್ಯೆಗೆ ಶರಣಾದ ರೈತ

Last Updated : Feb 6, 2023, 4:07 PM IST

ABOUT THE AUTHOR

...view details