ಅನುಮತಿಯಿಲ್ಲದೇ ಪುದುಚೇರಿಗೆ ಬಂದ ಕಾರ್ಡೇಲಿಯಾ ಕ್ರೂಸ್ ವಾಪಸ್
ಪುದುಚೇರಿ (ತಮಿಳುನಾಡು): ಕಳೆದ ವಾರ ಚೆನ್ನೈ ಬಂದರಿನಿಂದ ಪುದುಚೇರಿಗೆ ಖಾಸಗಿ ಕಂಪನಿಯ ಐಷಾರಾಮಿ ಪ್ರಯಾಣಿಕ ದೋಣಿ ಸೇವೆಯನ್ನು (ಕಾರ್ಡೆಲಿಯಾ ಕ್ರೂಸ್) ಪ್ರಾರಂಭಿಸಲಾಗಿತ್ತು. ಆದರೆ, ಹಡಗಿನಲ್ಲಿ ಕ್ಯಾಸಿನೊಗಳಿವೆ ಎಂದು ರಾಜಕೀಯ ಪಕ್ಷಗಳು ಪ್ರತಿಭಟಿಸಿವೆ. ಇದು ಪುದುಚೇರಿಯಲ್ಲಿ ಸಾಂಸ್ಕೃತಿಕ ಅವ್ಯವಸ್ಥೆಯನ್ನು ಉಂಟುಮಾಡುತ್ತದೆ. ಹಾಗಾಗಿ ಐಷಾರಾಮಿ ಹಡಗು ಆಗಮನಕ್ಕೆ ಎಐಎಡಿಎಂಕೆ, ಕಾಂಗ್ರೆಸ್ ಮತ್ತು ಕೆಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಹಡಗಿಗೆ ಪುದುಚೇರಿ ತಲುಪಲು ಇನ್ನೂ ಅನುಮತಿ ನೀಡಿಲ್ಲ ಎಂದು ರಾಜ್ಯಪಾಲರಾದ ತಮಿಳಿಸೈ ಇತ್ತೀಚೆಗೆ ಹೇಳಿದ್ದರು. ಈ ಸ್ಥಿತಿಯಲ್ಲಿ ಚೆನ್ನೈನಿಂದ ಹೊರಟ ಐಷಾರಾಮಿ ಹಡಗು ಪುದುಚೇರಿಯ ವಂಬಕಿರಪಾಳ್ಯಂ ತೀರದಿಂದ ಸುಮಾರು 4 ನಾಟಿಕಲ್ ಮೈಲು ದೂರದಲ್ಲಿ ಮುಂಜಾನೆ 4 ಗಂಟೆಯಿಂದ 5 ಗಂಟೆಗಳ ಕಾಲ ನಿಂತಿತ್ತು. ಕರಾವಳಿಯಿಂದ ಸಮುದ್ರದಲ್ಲಿ ಒಂದು ನಿರ್ದಿಷ್ಟ ದೂರವನ್ನು ತಲುಪುವ ಯಾವುದೇ ಹಡಗು ರಾಜ್ಯ ಬಂದರು ಪ್ರಾಧಿಕಾರದಿಂದ ಸೂಕ್ತ ಅನುಮತಿಯನ್ನು ಪಡೆಯಬೇಕು. ಆದರೆ ನೌಕಾಪಡೆ, ಸರಿಯಾದ ಅನುಮತಿಯಿಲ್ಲದ ಕಾರಣ ಹಡಗನ್ನು ಹಿಂತಿರುಗುವಂತೆ ಸೂಚಿಸಿತು.
Last Updated : Feb 3, 2023, 8:23 PM IST