ಲ್ಯಾಬ್‌ಗೆ ನುಗ್ಗಿದ ಚಿರತೆ ಸೆರೆ ಸಿಕ್ಕಿದ್ದು ಹೇಗೆ ನೋಡಿ! VIDEO - ತೆಲಂಗಾಣ
ಸಂಗಾರೆಡ್ಡಿ(ತೆಲಂಗಾಣ): ಸಂಗಾರೆಡ್ಡಿ ಜಿಲ್ಲೆಯ ಹೆಟೆರೊ ಲ್ಯಾಬ್‌ಗೆ ನುಗ್ಗಿದ ಚಿರತೆಯನ್ನು ನೆಹರೂ ಮೃಗಾಲಯದ ಸಿಬ್ಬಂದಿ ಕೊನೆಗೂ ಸೆರೆ ಹಿಡಿದಿದ್ದಾರೆ. ಬೆಳಿಗ್ಗೆ 4 ಗಂಟೆಗೆ ಚಿರತೆಯೊಂದು ಲ್ಯಾಬ್ ಹೆಚ್ ಬ್ಲಾಕ್‌ಗೆ ಪ್ರವೇಶಿಸಿದೆ. ಚಿರತೆ ಬಂದಿರುವುದನ್ನು ಕಂಡು ಲ್ಯಾಬ್ ಸಿಬ್ಬಂದಿ ಹೊರ ಬಂದು ಕೊಠಡಿಗೆ ಬೀಗ ಹಾಕಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ನೆಹರೂ ಮೃಗಾಲಯದ ವಿಶೇಷ ತಂಡವೂ ಅಲ್ಲಿಗೆ ತಲುಪಿ ಚಿರತೆ ಸೆರೆ ಹಿಡಿಯಲು ಹರಸಾಹಸ ಪಟ್ಟರು. ಸುಮಾರು 11 ಗಂಟೆಗಳ ನಂತರ ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು. ಅಧಿಕಾರಿಗಳು ಚಿರತೆಗೆ ಪ್ರಜ್ಞೆ ತಪ್ಪಿಸಿ, ತಕ್ಷಣ ಅದನ್ನು ಬೋನಿನಲ್ಲಿ ಸೆರೆ ಹಿಡಿದು ಮೃಗಾಲಯಕ್ಕೆ ಸ್ಥಳಾಂತರಿಸಿದ್ದಾರೆ.
Last Updated : Feb 3, 2023, 8:36 PM IST