ಹಾವೇರಿ: ಭೀಕರ ರಸ್ತೆ ಅಪಘಾತ, ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆ - ಭೀಕರ ರಸ್ತೆ ಅಪಘಾತ
ಹಾವೇರಿ: ಅಪರಿಚಿತ ಕಾರೊಂದು ಅತಿ ವೇಗವಾಗಿ ಬಂದಿದ್ದಲ್ಲದೇ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ಮಂಗಳವಾರ ಸಂಭವಿಸಿದೆ. ಕುಂದೂರ ಗ್ರಾಮದ 40 ವರ್ಷ ವಯಸ್ಸಿನ ರತ್ನವ್ವ ಸಂಶಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 48 ದಾಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ರತ್ನವ್ವ ಸಂಶಿ ತೂರಿಕೊಂಡು ಬಿದ್ದಿದ್ದಾರೆ. ಈ ಭಯಾನಕ ದೃಶ್ಯ ಅಲ್ಲಿನ ಸಿಸಿಟಿಯಲ್ಲಿ ಸೆರೆಯಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಶಿಗ್ಗಾಂವಿ ಪೊಲೀಸರು, ಪರಿಶೀಲನೆ ನಡೆಸಿದರು. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಅಪಘಾತದ ನಂತರ ಪರಾರಿಯಾಗಿರುವ ವಾಹನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎದೆ ಝಲ್ ಎನ್ನಿಸುವಂತಿದೆ. ರಸ್ತೆ ದಾಟುವ ವೇಳೆ ಎಚ್ಚರ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಬಿಸಿಲಿನಿಂದ ರಕ್ಷಿಸಲು ಪಾರ್ಕಿಂಗ್ ಸ್ಥಳದಲ್ಲಿ ಮಗು ಮಲಗಿಸಿದ ತಾಯಿ: ಕಾರು ಹರಿದು ಪ್ರಾಣಬಿಟ್ಟ ಬಾಲಕಿ