ಕರ್ನಾಟಕ

karnataka

Team India arrives in Bengaluru ahead of Nov 12 ICC World Cup match

ETV Bharat / videos

ನೆದರ್ಲೆಂಡ್ಸ್​ ವಿರುದ್ಧ ಔಪಚಾರಿಕ ಕದನ: ಬೆಂಗಳೂರಿಗೆ ಬಂದಿಳಿದ ಟೀಮ್​ ಇಂಡಿಯಾ - ETV Bharath Karnataka

By ETV Bharat Karnataka Team

Published : Nov 6, 2023, 10:10 PM IST

ಬೆಂಗಳೂರು: ಕೋಲ್ಕತ್ತಾದ ಈಡನ್​​ ಗಾರ್ಡನ್ಸ್​ನಲ್ಲಿ ದಕ್ಷಿಣ ಆಫ್ರಿಕಾವನ್ನು 243 ರನ್​ಗಳಿಂದ ಮಣಿಸಿದ ಟೀಮ್​ ಇಂಡಿಯಾ ಬೆಂಗಳೂರಿಗೆ ಆಗಮಿಸಿದೆ. 2023ರ ವಿಶ್ವಕಪ್​ನ ಲೀಗ್​ ಹಂತದ ಪಂದ್ಯಗಳಲ್ಲಿ 9ಕ್ಕೆ 8 ಪಂದ್ಯವನ್ನು ಗೆದ್ದಿರುವ ಟೀಮ್​ ಇಂಡಿಯಾ ಕೊನೆಯ ನೆದರ್ಲೆಂಡ್ಸ್​ ವಿರುದ್ಧದ ಔಪಚಾರಿಕ ಮುಖಾಮುಖಿಯನ್ನು ಚಿನ್ನಸ್ವಾಮಿ ಮೈದಾನದಲ್ಲಿ ಆಡಲಿದೆ. ರೋಹಿತ್ ಶರ್ಮಾ ಪಡೆ 8 ಪಂದ್ಯಗಳಲ್ಲಿನ ಗೆಲುವಿನಿಂದ ಮೊದಲ ತಂಡವಾಗಿ ಸೆಮೀಸ್​ಗೆ ಪ್ರವೇಶ ಪಡೆದುಕೊಂಡಿದೆ. 

ಬೆಂಗಳೂರಿನಲ್ಲಿ ನಡೆದ ಇತರ ವಿಶ್ವಕಪ್​ ಪಂದ್ಯಗಳು ದೊಡ್ಡ ಮೊತ್ತದ ರನ್​ಗಳ ಹೊಳೆಗೆ ಕಾರಣವಾಗಿವೆ.  ಫಾರ್ಮ್​ನಲ್ಲಿರುವ ಟೀಮ್​ ಇಂಡಿಯಾದಿಂದ ಕ್ರಿಕೆಟ್​ ಶಿಶುಗಳ ವಿರುದ್ಧ ಭರ್ಜರಿ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರು ತುದಿಗಾಲಿನಲ್ಲಿದ್ದಾರೆ. ಆರ್​ಸಿಬಿ ತಂಡಕ್ಕಾಗಿ ಆಡುವ ವಿರಾಟ್​ ಕೊಹ್ಲಿಗೆ ಬೆಂಗಳೂರಿನಲ್ಲಿ ಹೆಚ್ಚಿನ ಅಭಿಮಾನಿಗಳಿದ್ದಾರೆ. ಈ ವರ್ಷ ವಿರಾಟ್​ ವಿಶ್ವಕಪ್​​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಬೆಂಗಳೂರಿನ ಪಂದ್ಯದಲ್ಲೂ ಅವರಿಂದ ಇನ್ನೊಂದು ಬೃಹತ್​ ಇನ್ನಿಂಗ್ಸ್​ನ ನಿರೀಕ್ಷೆ ಇದೆ. 

ವಿರಾಟ್​ ಬೆಂಗಳೂರನ್ನು ತಮ್ಮ ಎರಡನೇ ತವರು ಮೈದಾನ ಎಂದು ಕರೆಯುತ್ತಾರೆ ಇಲ್ಲಿ ಅವರ 50ನೇ ಏಕದಿನ ಶತಕ ದಾಖಲಾಗುತ್ತಾ ಎಂಬುದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.  ವಿರಾಟ್ ರೀತಿಯಲ್ಲೇ ಆರ್​ಸಿಬಿ ಸ್ಟಾರ್​ ಬೌಲರ್​ ಮೊಹಮ್ಮದ್​ ಸಿರಾಜ್​ ಸಹ ತಂಡದಲ್ಲಿ ಆಡುತ್ತಿದ್ದು, ಇವರನ್ನು ನೋಡಲು ಪ್ರೇಕ್ಷಕರು ಕಿಕ್ಕಿರಿದು ಸೇರಲಿದ್ದಾರೆ. 

ಇದನ್ನೂ ಓದಿ:"ಸಚಿನ್​ ದಾಖಲೆ ಸಮಮಾಡಲು ಲೇಸರ್​ನಂತೆ ವಿರಾಟ್ ಫೋಕಸ್​ ಹೊಂದಿದ್ದರು"- ಎಬಿಡಿ

ABOUT THE AUTHOR

...view details