ಐತಿಹಾಸಿಕ ಏಷ್ಯಾಕಪ್ನೊಂದಿಗೆ ತವರಿಗೆ ಮರಳಿದ ಭಾರತ ಕ್ರಿಕೆಟ್ ತಂಡ- ವಿಡಿಯೋ - ತವರಿಗೆ ಮರಳಿದ ಟೀಮ್ ಇಂಡಿಯಾ
Published : Sep 18, 2023, 10:24 AM IST
ಮುಂಬೈ:ಏಷ್ಯಾಕಪ್‌ಗಾಗಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತೀಯ ಕ್ರಿಕೆಟ್ ತಂಡ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಫೈನಲ್ ಪಂದ್ಯದಲ್ಲಿ ಸಿಂಹಳೀಯರನ್ನು ಮಣಿಸಿ ಪ್ರತಿಷ್ಟಿತ ಪ್ರಶಸ್ತಿ ಗೆದ್ದುಗೊಂಡಿತು. ಕಳೆದ ರಾತ್ರಿ ತಂಡದ ಸದಸ್ಯರು ಕಪ್ನೊಂದಿಗೆ ತವರಿಗೆ ಮರಳಿದ್ದಾರೆ. ಮುಂಬೈ ಕಲಿನಾ ವಿಮಾನ ನಿಲ್ದಾಣದಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ, ಬುಮ್ರಾ, ಶ್ರೇಯಸ್ ಅಯ್ಯರ್, ಇಶನ್ ಕಿಶನ್ ಹೊರಬಂದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.
ಬಾಂಗ್ಲಾದೇಶ ಹೊರತುಪಡಿಸಿ ಉಳಿದ ತಂಡಗಳೊಂದಿಗೆ ಗೆಲುವು ಸಾಧಿಸಿರುವ ಭಾರತ, ಫೈನಲ್ ಪಂದ್ಯದಲ್ಲಿ ಕೇವಲ 50 ರನ್ಗಳಿಗೆ ಸಿಂಹಳೀಯರನ್ನು ಕಟ್ಟಿಹಾಕಿತು. ಯಾವುದೇ ವಿಕೆಟ್ ನಷ್ಟವಿಲ್ಲದೇ ರೋಹಿತ್ ಬಳಗ ಪಂದ್ಯ ಗೆದ್ದು ಬೀಗಿತು. ವೇಗಿ ಮಹಮ್ಮದ್ ಸಿರಾಜ್ 6 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕೇವಲ 21.3 ಓವರ್ಗಳಲ್ಲಿ ಫೈನಲ್ ಪಂದ್ಯ ಮುಕ್ತಾಯಗೊಂಡಿತು.
ಅಕ್ಟೋಬರ್ 22ರಿಂದ ಭಾರತ-ಆಸ್ಟ್ರೇಲಿಯಾ ನಡುವೆ ಮೂರು ಏಕದಿನ ಪಂದ್ಯ ನಡೆಯಲಿದೆ. ಸರಣಿಗೆ ಬಿಸಿಸಿಐ ತಂಡ ಪ್ರಕಟಿಸಿದೆ.
ಇದನ್ನೂ ಓದಿ:Asia Cup 2023: ಏಷ್ಯಾ ಕಪ್ ಗೆಲ್ಲಿಸಿಕೊಟ್ಟ ಸಿರಾಜ್.. ಫೈನಲ್ ಪಂದ್ಯದ ದಾಖಲೆಗಳು ಹೀಗಿವೆ..