ಗಾಂಧೀಜಿ, ನೆಹರೂ, ವಾಜಪೇಯಿ ಸೇರಿದಂತೆ ರಾಷ್ಟ್ರ ನಾಯಕರಿಗೆ ತರ್ಪಣ ಕೊಟ್ಟ ಹೋರಾಟಗಾರ - ಈಟಿವಿ ಭಾರತ ಕನ್ನಡ
ಚಾಮರಾಜನಗರ: ಮಹಾಲಯ ಅಮಾವಾಸ್ಯೆಯಂದು ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ತರ್ಪಣ ಕೊಟ್ಟು ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಅದರಂತೆ ಇಲ್ಲಿನ ಕನ್ನಡಪರ ಹೋರಾಟಗಾರರಾದ ಚಾ.ರಂ.ಶ್ರೀನಿವಾಸಗೌಡ ಎಂಬುವರು ದೇಶದ ಮಹಾನ್ ನಾಯಕರಿಗೆ ತರ್ಪಣ ಕೊಟ್ಟು ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅರ್ಚಕ ಅನಂತಪ್ರಸಾದ್ ಮಾರ್ಗದರ್ಶನದಲ್ಲಿ ಇಂದು ತಮ್ಮ ಮನೆಯಲ್ಲೇ ಮಹಾತ್ಮಾ ಗಾಂಧೀಜಿ, ನೆಹರೂ, ರಾಜೀವ್ ಗಾಂಧಿ, ಇಂದಿರಾ ಗಾಂಧಿ, ಎ.ಬಿ.ವಾಜಪೇಯಿ ಸೇರಿದಂತೆ ರಾಷ್ಟ್ರ ನಾಯಕರುಗಳಿಗೆ ತರ್ಪಣ ಕೊಟ್ಟಿದ್ದಾರೆ. ಈ ಮೂಲಕ ರಾಷ್ಟ್ರ ನಾಯಕರಿಗೆ ವಿನೂತನವಾಗಿ ನಮನ ಸಲ್ಲಿಸಿದ್ದಾರೆ.
Last Updated : Feb 3, 2023, 8:28 PM IST