ಧಾರವಾಡ: ಗ್ಯಾಸ್ ಸೋರಿಕೆಯಾಗಿದ್ದ ಟ್ಯಾಂಕರ್ ತೆರವು; ಹೆದ್ದಾರಿ ಸಂಚಾರಕ್ಕೆ ಮುಕ್ತ - Tanker clearance
ಧಾರವಾಡ :ಧಾರವಾಡ ಸಮೀಪ ಗ್ಯಾಸ್ ಸೋರಿಕೆಯಾಗಿ ತೀವ್ರ ಆತಂಕ ಸೃಷ್ಟಿಯಾಗಿದ್ದ ಟ್ಯಾಂಕರ್ ಅನ್ನು 16 ಗಂಟೆಗಳ ಬಳಿಕ ಇದೀಗ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4ರ ಅಂಡರ್‌ಪಾಸ್‌ನಲ್ಲಿ ಲಾರಿ ಸಿಲುಕಿಕೊಂಡಿತ್ತು. ಬುಧವಾರ ಸಂಜೆ 7ರ ಹೊತ್ತಿಗೆ ಸಿಲುಕಿದ್ದ ಟ್ಯಾಂಕರ್ ಇದೀಗ ಹೊರಬಂದಿದೆ. ಖಾಲಿ ಟ್ಯಾಂಕರ್ ತಂದು ಗ್ಯಾಸ್ ಡಂಪ್ ಮಾಡಲಾಗಿದೆ.
ಸಂಪೂರ್ಣವಾಗಿ ಅನಿಲ ಖಾಲಿಯಾದ ಹಿನ್ನೆಲೆಯಲ್ಲಿ ಧಾರವಾಡ-ಬೆಳಗಾವಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಘಟನೆ ಸುತ್ತಮುತ್ತಲಿನ ಗ್ರಾಮಗಳ ಜನರ ಆತಂಕಕ್ಕೆ ಕಾರಣವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಮನೆಗಳಲ್ಲಿ ಬೆಂಕಿ ಹಚ್ಚಿ ಅಡುಗೆ ಮಾಡದಂತೆ ಸೂಚನೆ ನೀಡಲಾಗಿತ್ತು. ಈ ಮೂಲಕ ಯಾವುದೇ ಅನಾಹುತ ಸಂಭವಿಸದಂತೆ ಜಿಲ್ಲಾಧಿಕಾರ ಕ್ರಮ ಕೈಗೊಂಡಿತ್ತು.
ಪ್ರಯಾಣಿಕರ ಹಿತದೃಷ್ಟಿಯಿಂದ ಬೆಳಗಾವಿಯಿಂದ ಧಾರವಾಡಕ್ಕೆ ಪ್ರಯಾಣಿಸುವ ವಾಹನಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿತ್ತು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ:Gas Leakage: ಗ್ಯಾಸ್ ಟ್ಯಾಂಕರ್ ಲೀಕ್: ಧಾರವಾಡ-ಬೆಳಗಾವಿ ನಡುವಿನ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಂಚಾರ ಬಂದ್