ವಿಜಯನಗರ: ಧಗಧಗನೆ ಹೊತ್ತಿ ಉರಿದ ಡೀಸೆಲ್ ಟ್ಯಾಂಕರ್, ಬೆಂಕಿಗೆ ಸಿಲುಕಿ ಬೈಕ್ ಸವಾರ ಸಾವು - fire on tanker in vijayanagara
ವಿಜಯನಗರ: ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಎದುರಿನಿಂದ ಬರುತ್ತಿದ್ದ ಬೈಕ್ ಸವಾರ ಸಜೀವ ದಹನವಾದ ಘಟನೆ ಜಿಲ್ಲೆಯ ಹರಪ್ಪನಹಳ್ಳಿ ರೈಲ್ವೇ ಗೇಟ್ ಬಳಿ ನಡೆದಿದೆ. ಬೈಕ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದರೂ ಕೂಡ ಸಾಧ್ಯವಾಗದೆ ಅವಘಡ ಸಂಭವಿಸಿದೆ. ಬೆಂಕಿಗೆ ಸಿಲುಕಿದ ಬೈಕ್ ಸವಾರ ಹಗರಿ ಬೊಮ್ಮನಹಳ್ಳಿ ತಾಲೂಕಿನ ಹಂಪಪಟ್ನಾ ಗ್ರಾಮದ ನಾಗರಾಜ್(35) ಎಂಬಾತ ಸ್ಥಳದಲ್ಲೇ ಸಜೀವ ದಹನವಾಗಿದ್ದಾನೆ. ಬೈಕ್ನಲ್ಲಿದ್ದ ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿದ್ದು, ಹರಪನಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್ ಚಾಲಕ ವಾಹನದಿಂದ ಜಿಗಿದು ಪಾರಾಗಿದ್ದು, ದಾವಣಗೆರೆಯಿಂದ ಹರಪ್ಪನಹಳ್ಳಿಗೆ ಬರುತ್ತಿದ್ದಾಗ ಅವಘಡ ಸಂಭವಿಸಿದೆ. ಹರಪ್ಪನಹಳ್ಳಿ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
Last Updated : Feb 3, 2023, 8:25 PM IST