ಬಿಜೆಪಿ ಸಮಾವೇಶದಲ್ಲಿ ತಮಿಳು ನಾಡಗೀತೆ.. ಕ್ಷಣಕಾಲ ಕನ್ನಡಿಗರು ತಬ್ಬಿಬ್ಬು.. ಸರಿಪಡಿಸಿ ಕನ್ನಡ ನಾಡಗೀತೆ ಹಾಡಿಸಿದ ಈಶ್ವರಪ್ಪ
ಶಿವಮೊಗ್ಗ:ನಗರದಲ್ಲಿ ನಡೆದಬಿಜೆಪಿ ತಮಿಳು ಬಾಂಧವರ ಸಮಾವೇಶದಲ್ಲಿ ಕರ್ನಾಟಕ ನಾಡಗೀತೆ ಬದಲಾಗಿ ಆಯೋಜಕರು ತಮಿಳುನಾಡಿನ ನಾಡಗೀತೆ ಶುರು ಮಾಡಿದ್ದರು. ಈ ವೇಲೆ ತಕ್ಷಣ ಎಚ್ಚೆತ್ತೆಉಕೊಂಡ ಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ಅದನ್ನು ನಿಲ್ಲಿಸಿ ಕನ್ನಡ ನಾಡಗೀತೆ ಹಾಡಿಸಿರುವ ಘಟನೆ ಗುರುವಾರ ನಡೆಯಿತು.
ಶಿವಮೊಗ್ಗ ರಾಷ್ಟ್ರೀಯ ಶಿಕ್ಷಣ ಸಮಿತಿ ಕ್ರೀಡಾಂಗಣದಲ್ಲಿ ಚುನಾವಣೆ ಹಿನ್ನೆಲೆ ನಡೆದ ತಮಿಳು ಬಾಂಧವರ ಸಮಾವೇಶ ಆಯೋಜಿಸಲಾಗಿತ್ತು. ಕಾರ್ಯಕ್ರಮ ಆರಂಭದಲ್ಲಿ ನಾಡಗೀತೆ ಎನ್ನುತ್ತಿದ್ದಂತೆ ಆಯೋಜಕರು ತಮಿಳುನಾಡಿನ ನಾಡಗೀತೆಯನ್ನು ಪ್ಲೇ ಮಾಡಿದರು. ನಾಡಗೀತೆಗೆ ಗೌರವ ನೀಡಲು ಎದ್ದು ನಿಂತಿದ್ದ ಎಲ್ಲರೂ ಒಂದು ಕ್ಷಣ ತಬ್ಬಿಬ್ಬಾದರು. ಪ್ಲೇ ಆಗುತ್ತಿರುವುದು ಕನ್ನಡನಾಡಿನ ನಾಡಗೀತೆ ಅಲ್ಲ ಎಂದು ಅರಿತ ಕೆ ಎಸ್ ಈಶ್ವರಪ್ಪನವರು ವೇದಿಕೆಯ ಮೈಕ್ ಬಳಿ ಯಾರು ನಾಡಗೀತೆ ಹಾಡುತ್ತಿರಿ ಬನ್ನಿ ಎಂದು ಕರೆದರು. ಈಶ್ವರಪ್ಪನವರು ಹೀಗೆ ಹೇಳುತ್ತಲೇ ತಮಿಳುಗೀತೆ ನಿಲ್ಲಿಸಲಾಯಿತು. ನಂತರ ಕನ್ನಡದ ನಾಡಗೀತೆ ಹಾಡಿಸಲಾಯಿತು. ಇದರಿಂದ ಸಮಾವೇಶದಲ್ಲಿ ನಡೆಯಬಹುದಾದ ಒಂದು ಅಚಾತುರ್ಯವನ್ನು ಮಾಜಿ ಸಚಿವ ಈಶ್ವರಪ್ಪ ತಡೆದರು.
ನಂತರ ಕಾರ್ಯಕ್ರಮ ಮುಂದುವರೆಯಿತು. ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ, ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಚನ್ನಬಸಪ್ಪ ಸೇರಿದಂತೆ ಬಿಜೆಪಿ ಮುಖಂಡರು ಸೇರಿದಂತೆ ತಮಿಳು ಸಮಾಜದವರು ಹಾಜರಿದ್ದರು.
ಇದನ್ನೂಓದಿ:ಬಿಜೆಪಿ ಬಡಿದೋಡಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವ ಅವಕಾಶ ಜನರಿಗೆ ಲಭಿಸಿದೆ: ರಾಜೀವ್ ಶುಕ್ಲಾ