ಮಳೆ ಅಬ್ಬರ: ಚೆನ್ನೈ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ- ವಿಡಿಯೋ - ವಿವಿಧೆಡೆ ಟ್ರಾಫಿಕ್ ಜಾಮ್
Published : Nov 22, 2023, 1:39 PM IST
ಈರೋಡ್ (ತಮಿಳುನಾಡು):ತಮಿಳುನಾಡಿನ ರಾಜಧಾನಿ ಚೆನ್ನೈ, ಈರೋಡ್ ಜಿಲ್ಲೆ ಸೇರಿದಂತೆ ವಿವಿಧೆಡೆ ಮಂಗಳವಾರ ಭಾರಿ ಮಳೆ ಸುರಿದಿದೆ. ಚೆನ್ನೈ ಮತ್ತು ಈರೋಡ್ ಜಿಲ್ಲೆಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ಕಡೆಗಳಲ್ಲಿ ರಸ್ತೆ ಮೇಲೆಯೇ ಮಳೆ ನೀರು ಹರಿದಿದ್ದರಿಂದ, ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು.
''ತಮಿಳುನಾಡಿನ ಕರಾವಳಿ ಮತ್ತು ನೈಋತ್ಯ- ಮಧ್ಯ ಪಶ್ಚಿಮ ಬಂಗಾಳಕ್ಕೆ ಹೊಂದಿಕೊಂಡಂತೆ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯಾಗಲಿದೆ. ಇಂದು ಕೂಡ ತಮಿಳುನಾಡಿನ ಕರಾವಳಿಯ ಹಲವೆಡೆ ಗುಡುಗು, ಮಿಂಚು ಸಹಿತ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ'' ಎಂದು ಚೆನ್ನೈ ಹವಾಮಾನ ಇಲಾಖೆ ತಿಳಿಸಿದೆ.
ಚೆನ್ನೈನ ವಿವಿಧೆಡೆ ನಿನ್ನೆ ಮಧ್ಯರಾತ್ರಿಯಿಂದಲೇ ವ್ಯಾಪಕ ಮಳೆ ಆರಂಭವಾಗಿದೆ. ಅಣ್ಣಾನಗರ, ನುಂಗಂಪಕ್ಕಂ, ಎಗ್ಮೋರ್, ಪುರಸೈವಕ್ಕಂ, ಚೆನ್ನೈ ಸೆಂಟ್ರಲ್, ಸೇತುಪಟ್ಟು, ಗಿಂಡಿ, ರಾಯಪೆಟ್ಟ, ರಾಯಪುರಂ ಹಾಗೂ ತಾಂಬರಂ, ಅಯ್ಯಪ್ಪಕ್ಕಂ, ಮುಡಿಚೂರ್, ಅಂಬತ್ತೂರು, ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ವರುಣನ ಅಬ್ಬರದಿಂದ ವಿವಿಧೆಡೆ ಟ್ರಾಫಿಕ್ ಜಾಮ್ ಆಗಿತ್ತು.
ಡಿಜಿಪಿ ಕಚೇರಿ ಸುತ್ತಮುತ್ತ 9 ಸೆಂ.ಮೀ, ಥಂಡೈಯಾರ್‌ಪೇಟ್, ಅಯನವರಂ, ರಾಯಪುರಂನಲ್ಲಿ 7 ಸೆಂ.ಮೀ, ಮನಾಲಿ, ಐಸ್ ಹೌಸ್, ಚೋಶಿಂಗನಲ್ಲೂರು, ಅಣ್ಣಾನಗರ ಪೆರಂಬೂರ್‌ನಲ್ಲಿ 6 ಸೆಂ.ಮೀ. ಮತ್ತು ಚೆನ್ನೈನ ವಿವಿಧ ಭಾಗಗಳಲ್ಲಿ 1 ಸೆಂ.ಮೀ. ನಿಂದ 5 ಸೆಂ.ಮೀ ಮಳೆ ಸುರಿದಿದೆ.
ಇದನ್ನೂ ಓದಿ:ಕಳಪೆ ವರ್ಗದಲ್ಲೇ ಮುಂದುವರೆದ ದೆಹಲಿ ವಾಯು ಗುಣಮಟ್ಟ; ಇನ್ನೊಂದು ವಾರವೂ ಇದೇ ವಾತಾವರಣ