Watch.... ಕಾರ್ಯಕರ್ತನ ಮೇಲೆ ಕಲ್ಲು ಎಸೆದ ತಮಿಳುನಾಡು ಸಚಿವರು - ಹೈನುಗಾರಿಕೆ ಸಚಿವ ಎಸ್ ಎಂ ನಾಸರ್
ತಿರುವಳ್ಳೂರು:ತಮಿಳುನಾಡು ಸಚಿವ ಎಸ್ ಎಂ ನಾಸರ್ ಅವರು ತಿರುವಳ್ಳೂರಿನಲ್ಲಿ ಡಿಎಂಕೆ ಕಾರ್ಯಕರ್ತನ ಮೇಲೆ ಕಲ್ಲು ಎಸೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜ್ಯದ ಹೈನುಗಾರಿಕೆ ಸಚಿವ ಎಸ್ ಎಂ ನಾಸರ್ ಕೂರಲು ಕುರ್ಚಿ ತರಲು ವಿಳಂಬ ಮಾಡಿದ ಪಕ್ಷದ ಕಾರ್ಯಕರ್ತರ ಮೇಲೆ ಕಲ್ಲು ಎಸೆದಿದ್ದಾರೆ.
ತಿರುವಳ್ಳೂರು ಕಲೆಕ್ಟರೇಟ್ ಬಳಿ ಉತ್ತುಕ್ಕೊಟ್ಟೈಗೆ ಹೋಗುವ ಮಾರ್ಗದಲ್ಲಿ ಆಯೋಜಿಸಿರುವ ಹುತಾತ್ಮರ ದಿನಾಚರಣೆಯ ಸಾರ್ವಜನಿಕ ಸಭೆಯಲ್ಲಿ ನಾಳೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕೆಲಸ ಭರದಿಂದ ಸಾಗುತ್ತಿದ್ದು, ಹೈನುಗಾರಿಕೆ ಸಚಿವ ಎಸ್ ಎಂ ನಾಸರ್ ಹಾಗೂ ಡಿಎಂಕೆ ಪದಾಧಿಕಾರಿಗಳೊಂದಿಗೆ ಉತ್ಸವದ ವ್ಯವಸ್ಥೆ, ವೇದಿಕೆ ಹಾಗೂ ಸಾರ್ವಜನಿಕರು ಕುಳಿತುಕೊಳ್ಳುವ ಸ್ಥಳಗಳ ಕಾಮಗಾರಿಯನ್ನು ಪರಿಶೀಲಿಸಿದರು. ಆಸನಗಳನ್ನು ತರುವಂತೆ ಕರೆದರೂ ನಿರ್ಲಕ್ಷಿಸಿದ ಪಕ್ಷದ ಕಾರ್ಯಕರ್ತರ ಮೇಲೆ ಸಚಿವ ನಾಸರ್ ಕಲ್ಲು ತೂರಾಟ ನಡೆಸಿದ್ದಾರೆ. ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ನೋಡಿ:ಚಿಕ್ಕಮಗಳೂರು ಹಬ್ಬ: 777 ಚಾರ್ಲಿ ಜೊತೆ ಹೆಜ್ಜೆ ಹಾಕಿದ ಶಾಸಕ ಸಿ ಟಿ ರವಿ