ಕರ್ನಾಟಕ

karnataka

ಬೆಳಕಿನ ಹಬ್ಬ ದೀಪಾವಳಿಗೆ ಕೈದಿಗಳಿಂದ ರುಚಿ ರುಚಿಯಾದ ಸಿಹಿ ತಿಂಡಿಗಳು ಸಿದ್ಧ..

ETV Bharat / videos

ದೀಪಾವಳಿ: ಕೈದಿಗಳಿಂದ ರುಚಿರುಚಿಯಾದ ಸಿಹಿತಿಂಡಿ ತಯಾರಿ, ಮಾರಾಟ- ವಿಡಿಯೋ - ಹೆಸರಾಂತ ಮಧುರೈ ಸುಂಗಿಡಿ ಸೀರೆ

By ETV Bharat Karnataka Team

Published : Nov 10, 2023, 10:46 AM IST

ಮಧುರೈ(ತಮಿಳುನಾಡು):ದೀಪಾವಳಿ ಹಬ್ಬಕ್ಕೆ ಇನ್ನೆರಡು ದಿನ ಬಾಕಿ ಇರುವಂತೆಯೇ ಮಧುರೈ ಕೇಂದ್ರ ಕಾರಾಗೃಹದ ಕೈದಿಗಳು ನಗರದ ಜನತೆಗಾಗಿ ಸಿಹಿತಿಂಡಿ ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಿಹಿ ತಿನಿಸು, ಬಟ್ಟೆಗಳು ಮತ್ತು ಇತರೆ ವಸ್ತುಗಳನ್ನು ತಯಾರಿಸಲು ಇವರು ಜೈಲು ಅಧಿಕಾರಿಗಳಿಂದ ಸಹಾಯ ಪಡೆಯುತ್ತಿದ್ದಾರೆ. ಈ ಉತ್ಪನ್ನಗಳನ್ನು ಜೈಲು ಬಜಾರ್‌ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶಗಳ ಜನರು ಇಲ್ಲಿಗೆ ಬಂದು ಖರೀದಿಸಬಹುದು. ಕೈದಿಗಳಿಗೆ ಉದ್ಯೋಗ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮಧುರೈ ಕೇಂದ್ರ ಕಾರಾಗೃಹದ ಅಧಿಕಾರಿಗಳು ಕೈಗೊಂಡಿರುವ ಉತ್ತಮ ಉಪಕ್ರಮ ಇದಾಗಿದೆ.

ಈ ಉತ್ಪನ್ನಗಳ ಮಾರಾಟದಿಂದ ಗಳಿಸಿದ ಹಣವನ್ನು ಜೈಲು ಕೈದಿಗಳಿಗೇ ಬಳಕೆ ಮಾಡಲಾಗುತ್ತದೆ. ಸೋಮವಾರ, ಕಾರಾಗೃಹ ಇಲಾಖೆ ಡಿಐಜಿ ಪಳನಿ ಅವರು ಮಧುರೈ ಸೆಂಟ್ರಲ್ ಜೈಲ್ ಬಜಾರ್​ನಲ್ಲಿ ಕೈದಿಗಳು ತಯಾರಿಸಿದ ಈ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದರು.

''ಜೈಲು ಅಧಿಕಾರಿಗಳು, ತಮಿಳುನಾಡು ಕಾರಾಗೃಹ ಇಲಾಖೆಯ ಡಿಜಿಪಿ ಅಮರೇಶ್ ಪೂಜಾರಿ ಸಲಹೆಯ ಮೇರೆಗೆ ಕೈದಿಗಳ ಶಿಕ್ಷಣ ಮತ್ತು ವೃತ್ತಿಜೀವನವನ್ನು ಸುಧಾರಿಸಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ'' ಎಂದು ಡಿಐಜಿ ಪಿಲಾನಿ ತಿಳಿಸಿದ್ದಾರೆ.

ಕೈದಿಗಳು ಸಿದ್ಧಪಡಿಸುವ ಉತ್ಪನ್ನಗಳಿವು:ತಾಜಾ ಸಿಹಿ ತಿನಿಸು ಮತ್ತು ಮಸಾಲೆಯುಕ್ತ ವಿವಿಧ ತಿಂಡಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ತಯಾರಿಸಲಾಗುತ್ತದೆ. ನಂತರ ಅವುಗಳನ್ನು ಮಾರಾಟ ಮಾಡಲಾಗುತ್ತದೆ. ಸಿಹಿತಿನಿಸು ಪ್ರತಿ ಕೆ.ಜಿಗೆ ಅಂದಾಜು 300ರೂ. ಹಾಗೂ ಮಸಾಲೆ ವಿವಿಧ ತಿಂಡಿಗಳು ಪ್ರತಿ ಕೆ.ಜಿಗೆ 240 ರೂ. ಮಾರಾಟ ಮಾಡಲಾಗುತ್ತಿದೆ. ಚೆಕ್ಕು ತುಪ್ಪ, ಕಡಲೆ ಎಣ್ಣೆ, ತೆಂಗಿನೆಣ್ಣೆಯನ್ನೂ ಕೈದಿಗಳು ತಯಾರಿಸುತ್ತಾರೆ. ಹೆಚ್ಚುವರಿಯಾಗಿ, ಕಂಬಳಿಗಳು, ಟವೆಲ್‌ಗಳು, ನೇಯ್ದ ಖೈಲಿಗಳು ಮತ್ತು ಹೆಸರಾಂತ ಮಧುರೈ ಸುಂಗಿಡಿ ಸೀರೆಗಳನ್ನು ಜೈಲಿನಲ್ಲಿ ಸಿದ್ಧಪಡಿಸುತ್ತಾರೆ. ದೀಪಾವಳಿ ಹಬ್ಬವನ್ನು ನವೆಂಬರ್ 12ರಂದು ದೇಶ, ವಿದೇಶಗಳಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ:ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕಾಶ್ಮೀರದ ಮೊಘಲ್​ ಗಾರ್ಡನ್ : ವಿಡಿಯೋ​

ABOUT THE AUTHOR

...view details