ಟಿ20 ವಿಶ್ವಕಪ್ : ಭಾರತದ ಗೆಲುವಿನ ಸಂಭ್ರಮಕ್ಕೆ ಪೊಲೀಸರ ಲಾಟಿ ಏಟು! - ಈಟಿವಿ ಭಾರತ ಕರ್ನಾಟಕ
ಪುಣೆ (ಮಹಾರಾಷ್ಟ್ರ): ಮೆಲ್ಬರ್ನ್ನಲ್ಲಿ ನಡೆದ ಟಿ20 ವಿಶ್ವಕಪ್ನ ಭಾರತ ಮತ್ತು ಪಾಕಿಸ್ತಾನ ಪಂದ್ಯ ಕೊನೆವರಗೂ ರೋಚಕವಾಗಿತ್ತು. ಕೊನೆಯ ಓವರ್ನ ಕೊಹ್ಲಿಯ ಅದ್ಭುತ ಸಿಕ್ಸ್ ಮತ್ತು ಅಶ್ವಿನ್ ಸಿಂಗಲ್ ರನ್ನಿಂದ ಭಾರತ ಪಾಕಿಸ್ತಾನವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 83 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನ ನಂತರ ಪುಣೆಯಲ್ಲಿ ಸಾರ್ವಜನಿಕರು ಸಂಭ್ರಮಾಚರಣೆ ಆರಂಭಿಸಿದ್ದರು. ಭಾರತ ಕ್ರಿಕೆಟ್ ತಂಡ ದೀಪಾವಳಿ ಉಡುಗೊರೆ ನೀಡಿದೆ ಎಂದು ಸಂಭ್ರಮಿಸಿದರು. ಈ ವೇಳೆ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದಕ್ಕೆ ಜನರನ್ನು ಚದುರಿಸಲು ಪೊಲೀಸರು ಲಾಟಿ ಬೀಸಿದರು.
Last Updated : Feb 3, 2023, 8:29 PM IST